ಮುಗಿದ ಕಿರಿಕ್ ! ಸಂಯುಕ್ತಾ ಹೆಗ್ಡೆ ಬಳಿ ಕ್ಷಮೆ ಕೇಳಿದ ಕವಿತಾ ರೆಡ್ಡಿ

ಬೆಂಗಳೂರು, ಸೆಪ್ಟೆಂಬರ್, 07,2020(www.justkannda.in):

ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಪಾರ್ಕಿನಲ್ಲಿ ಸ್ಪೋರ್ಟ್ಸ್ ಬಟ್ಟೆ ತೊಟ್ಟಿಕೊಂಡ ಗೆಳತಿಯರ ಜೊತೆ ವರ್ಕೌಟ್ ಮಾಡುತ್ತಿದ್ದ ನಟಿಗೆ ಕವಿತಾ ರೆಡ್ಡಿ ಎಂಬುವರೊಂದಿಗೆ ದೊಡ್ಡ ರಾದ್ದಾಂತ ಮಾಡಿಕೊಂಡಿದ್ದರು.

ಈ ಸಂಬಂಧ ತನ್ನ ತಪ್ಪಿನ ಅರಿವಾಗಿ ‘ನನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ನೈತಿಕ ಪೊಲೀಸ್‌ ಗಿರಿಯನ್ನು ವಿರೋಧಿಸುತ್ತೇನೆ ನಾನು ಇನ್ನು ಈ ವಾದವನ್ನು ಇಲ್ಲಿಗೆ ಮುಗಿಸುತ್ತೇನೆ. ಸಂಯುಕ್ತ ಹೆಗಡೆ ಅವರ ಬಳಿ ಘಟನೆ ಬಗ್ಗೆ ಕ್ಷಮೆ ಕೇಳುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಪಾರ್ಕಿನಲ್ಲಿ ನಡೆದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕವಿತಾ ಪೋಲಿಸ್ ಗಿರಿ ಮಾಡಿದ್ದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಅನೇಕ ಸೆಲೆಬ್ರಿಟಿಗಳು ಕೂಡ ಸಂಯುಕ್ತಾ ಪರ ನಿಂತಿದ್ದರು.