ಹುಣಸೂರು ತಾಲ್ಲೂಕಿನಲ್ಲಿ ಹುಲಿ ಬೇಟೆ ಪ್ರಕರಣ : ಅರಣ್ಯ ಸಿಬ್ಬದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

ಮೈಸೂರು,ಸೆಪ್ಟಂಬರ್,7,2020(www.justkannada.in):  ನಾಗರಹೊಳೆ ಅರಣ್ಯದಲ್ಲಿ ಹುಲಿ ಬೇಟೆಯಾಡಿದ್ದ ಆರೋಪಿಗಳನ್ನ ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.tiger- hunting –case-Union Minister -Prakash Javadekar - appreciation -forest staff

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನಾಗರಹೊಳೆಯ ಕಲ್ಲಹಳ್ಳದಲ್ಲಿ ಆರೋಪಿಗಳು ಹುಲಿಗೆ ಗುಂಡಿಕ್ಕಿ‌ ಕೊಂದಿದ್ದರು. ಬಳಿಕ ಹುಲಿಯ ‌ಕಾಲನ್ನು ಕತ್ತರಿಸಿಕೊಂಡು ಹೋಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಪ್ರಕರಣವನ್ನ ನಾಲ್ಕೇ ದಿನದಲ್ಲಿ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದರು.tiger- hunting –case-Union Minister -Prakash Javadekar - appreciation -forest staff

ಅರಣ್ಯ ಸಿಬ್ಬಂದಿಗಳ ಈ ಕಾರ್ಯಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್  ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: tiger- hunting –case-Union Minister -Prakash Javadekar – appreciation -forest staff