ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು,ಸೆಪ್ಟಂಬರ್,7,2020(www.justkannada.in):  ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೊಳಿಸವಂತೆ ಆಗ್ರಹಿಸಿ ಮೈಸೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.   jk-logo-justkannada-logo

ಜಿಲ್ಲಾಧಿಕಾರಿಗಳ ಕಛೇರಿ ಬಳಿ ಜಮಾಯಿಸಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಸಂಚಾಲಕ ಎಸ್. ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 5 ಜನರ ನ್ಯಾಯಧೀಶರ ಪೀಠವು ಇತ್ತೀಚೆಗೆ ನೀಡಿದ ತೀರ್ಪನ್ನು ಕದಸಂಸ  ಮೈಸೂರು ಜಿಲ್ಲಾ ಸಮಿತಿಯು ಸ್ವಾಗತಿಸುತ್ತದೆ. ಹಿಂದಿನ ಕೆಲ ತೀರ್ಪುಗಳಲ್ಲಿ ಒಳ ಮೀಸಲಾತಿ ಬೇಕಿಲ್ಲ ಎಂದು ಹೇಳಿದ್ದವು. ಒಳ ಮೀಸಲಾತಿ ಮೂಲಕ ಹಿಂದುಳಿದ ಜಾತಿಗಳನ್ನು ಮುಂದಕ್ಕೆ ತರಲು ಸಾಧ್ಯವಿದೆ. ಈಗಾಗಿ ಇದು ಐತಿಹಾಸಿಕ ತೀರ್ಪು ವಿರೋಧಿಸುವವರು ಪರಿಶಿಷ್ಟರನ್ನು ವಿರೋಧಿಗಳು ಎಂದರೂ ತಪ್ಪಿಲ್ಲ ಎಂದು ಕಿಡಿಕಾರಿದರು.protest-mysore-demanding-sadashiva-commission-report

ಪರಿಶಿಷ್ಟರನ್ನು ಅರ್ಥಿಕವಾಗಿ, ಸಾಮಾಜಿಕವಾಗಿ , ರಾಜಕೀಯವಾಗಿ ಮುಂದಕ್ಕೆ ತರಲು ಮೀಸಲಾತಿ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಆದರೂ ಕೆಲ ವರ್ಗಗಳು ಇಂದಿಗೂ ಹಿಂದೆ ಉಳಿದಿವೆ. ಹೀಗಾಗಿ ಒಳ ಮೀಸಲಾತಿ ಅಗತ್ಯವಿದೆ. ಆದ್ದರಿಂದ ನ್ಯಾ. ಸದಾಶಿವ ಆಯೋಗ ವರದಿ ಜಾರಿಯಾಗಬೇಕು. ಇದೇ 2020ರ ಸೆಪ್ಟೆಂಬರ್ ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ವರದಿ ಮಂಡಿಸಿ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Key words: Protest –Mysore-demanding- Sadashiva Commission -Report