ಮಲೈಕಾ ಅರೋರಾಗೆ ಕೊರೊನಾ ಸೋಂಕು

ಬೆಂಗಳೂರು, ಸೆಪ್ಟೆಂಬರ್, 07,2020(www.justkannda.in): ಅರ್ಜುನ್ ಕಪೂರ್ ಗೆ ಕೊರೊನಾ ದೃಢಪಟ್ಟ ನಂತರ ಈಗ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರಾಗೂ ಸೋಂಕು ದೃಢ ಪಟ್ಟಿದೆ.

ಯಾವುದೇ ರೀತಿಯ ರೋಗ ಲಕ್ಷಣ ಕಂಡುಬಂದಿಲ್ಲ, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನಲ್ಲಿರುವುದಾಗಿ ಮಲೈಕಾ ಅವರು ತಿಳಿಸಿದ್ದಾರೆ.

ಈ ಬಗ್ಗೆ ಅವರ ಸಹೋದರಿ ಅಮೃತಾ ಅರೋರಾ, ಮಲೈಕಾ ಅವರಿಗೆ ಕೊರೊನಾ ದೃಢಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.