ಬಿಜೆಪಿ 3ನೇ ಅಭ್ಯರ್ಥಿ ಗೆದ್ದು ಕಾಂಗ್ರೆಸ್ 2ನೇ ಅಭ್ಯರ್ಥಿ ಸೋತಿದ್ದಾರೆ ಅಂದ್ರೆ ಅದಕ್ಕೆ ನೇರ ಹೊಣೆ ಜೆಡಿಎಸ್- ಕೆಪಿಸಿಸಿ ವಕ್ತಾರ ಎಂ. ಲಕ್ಷಣ್.

ಮೈಸೂರು,ಜೂನ್,11,2022(www.justkannada.in): ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಗೆದ್ದು,  ಕಾಂಗ್ರೆಸ್  2ನೇ ಅಭ್ಯರ್ಥಿ  ಸೋತಿದ್ದಾರೆ ಎಂದರೆ ಅದಕ್ಕೆ ನೇರ ಹೊಣೆ ಜೆಡಿಎಸ್ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್ , ನಾವು ಮುಂದೆಯೂ ಹೇಳುತ್ತೇವೆ ಜೆಡಿಎಸ್ ಬಿಜೆಪಿಯ ಬಿ ಟೀಮ ಅಂತಾ. ರಾಜ್ಯಸಭೆ ಸ್ಪರ್ಧೆ ಮಾಡಿದ್ದ ಕುಪೇಂದ್ರರೆಡ್ಡಿ ಅಫಿಡೆವಿಟ್ ಸಲ್ಲಿಸಿದ್ದಾರೆ‌. ಅದರಲ್ಲಿ 350 ಕೋಟಿ ಸಾಲ ಕೊಟ್ಟಿದ್ದಾರೆ ಎಂದು ಅಫಿಡೆವಿಟ್ ನಲ್ಲಿ ತೋರಿಸಿದ್ದಾರೆ. ಭವಾನಿ ರೇವಣ್ಣ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ, ಪುಟ್ಟರಾಜು, ಎಚ್ ಟಿ ರಮೇಶ್ ಅವರಿಗೆ ಸಾಲ ಕೊಟ್ಟಿದ್ದಾರೆ. ಏಪ್ರಿಲ್ ನಲ್ಲಿ 19.8  ಕೋಟಿ ಸಾಲ ಕೊಟ್ಟಿದ್ದಾರೆ. ಯಾಕೆ ಕೊಟ್ಟಿದ್ದಾರೆ ಹೇಳಬೇಕು ಎಂದು ಆಗ್ರಹಿಸಿದರು.

ಕುಮಾರಸ್ವಾಮಿಯವರಿಗೆ ಮೈಮೇಲೆ ದೇವರು ಬಂದಿದ್ಯಾ , ದೆವ್ವಾ ಬಂದಿದ್ಯಾ ಗೊತ್ತಿಲ್ಲ. ಮಾತೆತ್ತಿದರೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಬೈಯುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ.? ಜಾತ್ಯಾತೀತ ಎಂಬ ಬೆಲೆ ನಿಮಗೆ ನೈತಿಕತೆ ಇಲ್ಲ. ದಯವಿಟ್ಟು ನಿಮ್ಮ‌ ಪಕ್ಷದ ಜ್ಯಾತ್ಯಾತೀತ ಪದ ಕಿತ್ತಾಕಿ. ಅದರ ಬೆಲೆ ನಿಮಗೆ ಗೊತ್ತಿಲ್ಲ. ದೇವೆಗೌಡರು ರಾಜ್ಯಸಭೆಗೆ ಕಳುಹಿಸಲು ಬಿಜೆಪು ಕಾರಣ ಅಂತೀರಿ. ನಿಮಗೆ ಮಾನ ಮರ್ಯಾದೆ ಇದ್ಯಾ..? ಇಬ್ರಾಹಿಂ ಎಲ್ಲೋದ್ರು..? ನಿಮ್ಮ ಸಮುದಾಯದ ವ್ಯಕ್ತಿಗೆ ಮೋಸ ಆಗಿದೆಯಲ್ಲಾ ಈಗ ಯಾಕೆ ಪತ್ತೆ ಇಲ್ಲ ಎಂದು ಎಂ ಲಕ್ಷ್ಮಣ್ ಚಾಟಿ ಬೀಸಿದರು.

ಸಂಸದ ಪ್ರತಾಪ್ ಸಿಂಹಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಎಂ.ಲಕ್ಷ್ಮಣ್

ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಮೈಸೂರು ಜಿಲ್ಲೆ.  ನಗರಕ್ಕೆ ಸಿದ್ದರಾಮಯ್ಯ ಕೊಡುಗೆ ಏನು ಅಂತ ಪ್ರಶ್ನೆ ಮಾಡಿದ್ದೀರಿ. ಜೂನ್ 24 ರೊಳಗೆ ನೀವು ಚರ್ಚೆಗೆ ಬನ್ನಿ. ದಾಖಲೆ ಸಮೇತ ನಾನು ಬರುತ್ತೇನೆ. ಜೂನ್ 24ರ ಒಳಗೆ ನೀವು ಸಮಯ ಸ್ಥಳ ಹೇಳದಿದ್ದರೆ ನಿಮ್ಮ ಕಚೇರಿಗೆ ನೇರವಾಗಿ ನಾನೆ ಬರುತ್ತೇನೆ ಎಂದು ಬಹಿರಂಗ ಆಹ್ವಾನ ನೀಡಿದರು.

Key words  BJP -won – Congress- lost-JDS-KPCC spokesperson-M. Lakshan.