ಕೇಸರಿ ಶಾಲು ಹಾಕಿಕೊಂಡು ಪಕ್ಷದ ಅಂತಿಮ ಯಾತ್ರೆಗೆ ತೀಲಾಂಜಲಿ- ಹೆಚ್.ಡಿಕೆ ವಿರುದ್ದ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ.

ಮಂಡ್ಯ,ಜನವರಿ,30,2024(www.justkannada.in):  ಮಂಡ್ಯ ಜಿಲ್ಲೆಗೆ ಹೆಚ್.ಡಿ ಕುಮಾರಸ್ವಾಮಿ ಕೊಡುಗೆ ಏನು..?  ಈಗ ಕೇಸರಿ ಶಾಲು ಹಾಕಿಕೊಂಡು ಜೆಡಿಎಸ್ ಪಕ್ಷದ ಅಂತಿಮ ಯಾತ್ರೆಗೆ ತೀಲಾಂಜಲಿ ಇಟ್ಟಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಕೆರೆಗೋಡು ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಯಾವುದೇ ಧರ್ಮಕ್ಕೆ ನಿಖರವಾದ ಬಣ್ಣ, ಪ್ಲಾನ್ ಇರೋದಿಲ್ಲ. ಕುವೆಂಪು ತತ್ವವನ್ನ ಮಂಡ್ಯ ಜಿಲ್ಲೆ ಜನರು ಮೈಗೂಡಿಸಿಕೊಂಡಿದ್ದಾರೆ. ಜಿಲ್ಲೆಯ ನೆಮ್ಮದಿ ಹಾಳು ಮಾಡೋಕೆ ಹೊರಟಿದ್ದಾರೆ.  ರಾಷ್ಟ್ರಧ್ವಜ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಮಂಡ್ಯಕ್ಕೆ ಹೆಚ್ ಡಿ ಕುಮಾರಸ್ವಾಮಿ ಕೊಡುಗೆ ಏನು..? ಬಾವುಟ ವಿಚಾರದ ಮೂಲಕ ಭಯ ಹುಟ್ಟಿಸಿದ್ದಾರೆ. ಹೆಚ್.ಡಿಕೆ 2ಬಾರಿ ಸಿಎಂ ಆಗಲು ಮಂಡ್ಯದ ಜನ ಕಾರಣ. ಅದನ್ನ ಹೆಚ್.ಡಿಕೆ ಮರೆತಿರಬಹುದು. ನಿಮಗೆ ನಮ್ಮ ಮೂರ್ನಾಲ್ಕು ಜನರ ಮೇಲೆ ದ್ವೇಷವಿದೆ ಆದರೆ ಮಂಡ್ಯ ಜಿಲ್ಲೆ ಜನ ಏನು ಮಾಡಿದ್ರು ಎಂದು ಚಲುವರಾಯಸ್ವಾಮಿ ಗುಡುಗಿದರು.

ಮಂಡ್ಯದಲ್ಲಿ ಬಿಜೆಪಿ ಇರಲಿಲ್ಲ ಜೆಡಿಎಸ್ ಕಾಂಗ್ರೆಸ್ ಇದ್ದವು. ಈಗ ಕೇಸರಿ ಶಾಲು ಹಾಕಿಕೊಂಡು ಹೆಚ್.ಡಿಕೆ ಪಕ್ಷದ ಅಂತಿಮ ಯಾತ್ರೆಗೆ ತೀಲಾಂಜಲಿ ಇಟ್ಟಿದ್ದಾರೆ. ಸಿಟಿ ರವಿ ಯುವಕರನ್ನ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ.  ಹೆಚ್.ಡಿಕೆ ರಾಷ್ಟ್ರಧ್ವಜದ ವಿರುದ್ದ ಬಂದಿದ್ದಾರೆ. ಜೆಡಿಎಸ್ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ  ಬಿಜೆಪಿ ಜೆಡಿಎಸ್ ನವರು ಚುನಾವಣೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: jds- party -final yatra – saffron flag – Minister –Chaluvarayaswamy