ಕೇಸರಿ ಶಾಲು ಹಾಕಿದ್ದು ಅಪರಾಧವೇ ? ಸಚಿವ ಚಲುವರಾಯಸ್ವಾಮಿ ವಿರುದ್ದ ಹೆಚ್.ಡಿಕೆ ಗುಡುಗು

ಬೆಂಗಳೂರು,ಜನವರಿ,30,2024(www.justkannada.in): ನಾವು ಮಂಡ್ಯಕ್ಕೆ ಬೆಂಕಿ ಹಚ್ಚಲು ಹೋಗಿರಲಿಲ್ಲ ಬೆಂಕಿ ಹಚ್ಚಿದ್ದು ನೀವು. ನಾವು ಕೇಸರಿ ಶಾಲು ಹಾಕಿದ್ದು ಅಪರಾಧವೇ ? ಎಂದು ಸಚಿವ ಚಲುವರಾಯಸ್ವಾಮಿ ವಿರುದ್ದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಚಿವ ಚಲುವರಾಯಸ್ವಾಮಿ  ಆರೋಪಕ್ಕೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಸಿಎಂ, ಉಸ್ತುವಾರಿ ಸಚಿವರಿಗೆ ಹೇಳುತ್ತೇನೆ. ನನಗೂ, ಕೆರೆಗೋಡು ಘಟನೆಗು ಸಂಬಂಧ ಇಲ್ಲ ಸರ್ಕಾರದ ನಡವಳಿಕೆಯೇ ಇದಕ್ಕೆ ಕಾರಣ  ಬಿಜೆಪಿ ಪ್ರತಿಭಟನೆಗೆ ನನಗೂ ಆಹ್ವಾನ ಕೊಟ್ಟಿದ್ರು ಎಂದರು.

ಕೇಸರಿ ಶಾಲು ಹಾಕಿಕೊಂಡು ಜನತಾಪರಿವಾರದ ಹೋರಾಟವನ್ನ ಅಂತ್ಯ ಮಾಡಿದ್ರು ಎಂದರು. ಕೇಸರಿ ಶಾಲು ಹಾಕಿದ್ದು ಅಪರಾಧವೇ ? ಜೈ ಭೀಮ್ ನ ಶಾಲನ್ನೂ ನಾನು ಹಾಕಿಕೊಂಡಿದ್ದೆ. ಆದರೆ ಅದು ಚಲುವರಾಯಸ್ವಾಮಿಗೆ ಕಾಣಿಸಲಿಲ್ಲ ಕೇಸರಿ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಯಾಕೆ ಸಂಕುಚಿತ ಮನೋಭಾವ ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ತ್ರಿವಣ ಧ್ವಜದಲ್ಲಿರುವ ಕೇಸರಿ ತೆಗೆದರೆ ಏನು ಅರ್ಥ ಕೊಡುತ್ತದೆ. ಕೇಸರಿ ಬಣ್ಣವನ್ನ ಏಕೆ ಅದಕ್ಕೆ ಲೇಪನ ಮಾಡಿದ್ದಾರೆ ಗೊತ್ತಾ. ಕೇಸರಿ ಹಾಕಿದ್ದೇ ಅಪರಾಧ ಎನ್ನುತ್ತೀರಲ್ಲ. ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಸಮಾಜದಲ್ಲಿ ಶಾಂತಿ ಮೂಡಿಸಲು ನಿಮ್ಮಿಂದ ನಾನು ಕಲಿಯಬೇಕಿಲ್ಲ. 1992 ರಿಂದ ಜನ ನಮ್ಮನ್ನು ಗುರುತಿಸಿದ್ದಾರೆ. 2019 ರ ಬಜೆಟ್ ಪುಸ್ತಕ ನೋಡಿ, ಸಕ್ಕರೆ ಕಾರ್ಖಾನೆಗೆ 100 ಕೋಟಿ ರೂ. ಇಟ್ಟಿದ್ದೆ  ಆದರೆ ಕೆಲಸ ಮಾಡಲು ಕಾಂಗ್ರೆಸ್ ಪಕ್ಷವೇ ಬಿಟ್ಟಿಲ್ಲ. ಕಾಂಗ್ರೆಸ್ ನವರು ಆಡಳಿತ ನಡೆಸಲು ಬಿಟ್ಟಿಲ್ಲ ಸರ್ಕಾರಿ ಬಂಗಲೆ ಬಿಟ್ಟು ಕೊಡದೆ ಇಟ್ಟುಕೊಂಡಿದ್ದು ಯಾರು..? ಹಾಗಾಗಿ ತಾಜ್ ವೆಸ್ಟೆಂಡ್ ಗೆ ಹೋಗಬೇಕಾಯ್ತು ಎಂದು ಕಾಂಗ್ರೆಸ್ ಗೆ ಹೆಚ್.ಡಿಕೆ ಟಾಂಗ್ ನೀಡಿದರು.

ಸೋತರೂ ನಾನು ಜನರನ್ನ ಬಿಟ್ಟು ಹೋಗಿಲ್ಲ. ನಿನ್ನೆ ಕೆರೆಗೋಡಿನಲ್ಲಿ ಹಿಂದುತ್ವದ ಬಗ್ಗೆ ಚರ್ಚೆ ಮಾಡಿಲ್ಲ. ಹನುಮಾನ ಧ್ವಜದ ಬಗ್ಗೆಯೂ ಮಾತಾಡಿಲ್ಲ.ಅಹಿತಕರ ಘಟನೆಗೆ ಕಾಂಗ್ರೆಸ್ ಕಾರಣ ಎಂದಿದ್ದೇನೆ . ಸ್ಥಳೀಯ ಶಾಸಕರಿಗೆ ಕೆಲಸ ಮಾಡೋದನ್ನ ಕಲಿಸಿಕೊಡಿ ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

Key words: keregodu-hanuma-flag-HDK – against -Minister -Chaluvarayaswamy