ಬಿಜೆಪಿ ಜೊತೆ ಜೆಡಿಎಸ್ ಬಹುತೇಕ ವಿಲೀನ- ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯ.

ಬೆಂಗಳೂರು,ಜನವರಿ,30,2024(www.justkannada.in): ಮಂಡ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಹಿಗಾಗಿ ಜೆಡಿಎಸ್ ನವರು ಬಿಜೆಪಿ ಜೊತೆ ಸೇರಿ ಹೋಗಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಬಹುತೇಕ ವಿಲೀನವಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.

ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್.ಡಿಕುಮಾರಸ್ವಾಮಿ ಕೇಸರಿ ಶಾಲನ್ನಾದರೂ ಹಾಕಿಕೊಳ್ಳಲಿ ಏನಾದರೂ ಹಾಕಿಕೊಳ್ಳಲಿ. ಬಹುತೇಕ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ವಿಲೀನ ಆಗಿದೆ. ಯಾವ ಬಣ್ಣದ ಬಾವುಟ ಬೇಕಾದರೂ ಹಾಕಿಕೊಳ್ಳಲಿ ಬಿಡಿ ಎಂದರು.

ಮಂಡ್ಯ ಜಿಲ್ಲೆಯಲ್ಲಿ  ಬಿಜೆಪಿಗೆ ಅಸ್ತಿತ್ವ ಇಲ್ಲ. ಹೀಗಾಗಿ ಜೆಡಿಎಸ್ ನವರು ಬಿಜೆಪಿ ಜೊತೆ ಸೇರಿ ಹೋಗಿದ್ದಾರೆ. ಗೊಂದಲ ಮೂಡಿಸಬೇಕು ಅಂತ ಏನೇನೋ ಮಾಡುತ್ತಿದ್ದಾರೆ. ಹಳೆ ಮೈಸೂರು ಭಾಗದ ಜನ ಅಣ್ಣತಮ್ಮಂದಿರ ರೀತಿ ಬದುಕುತ್ತಿದ್ದಾರೆ. ಆದರೆ ಇವರು ಅಶಾಂತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: JDS- almost –merged- with- BJP- DCM -DK Shivakumar