ರಾಧಿಕಾ ಪಂಡಿತ್ ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ: ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸುದ್ದಿ !

ಬೆಂಗಳೂರು, ಜೂನ್ 12, 2019 (www.justkannada.in): ಸಿನಿಮಾ ಹಾಗೂ ರಾಜಕೀಯ ರಂಗದಲ್ಲಿ ಹೊಸದೊಂದು ಸುದ್ದಿಯೊಂದು ಹೊರ ಬಿದ್ದಿದೆ.

ನಟಿ ರಾಧಿಕಾ ಪಂಡಿತ್ ಅವರು ಹಾಸನಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ರಾಧಿಕಾ ಪಂಡಿತ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನದ ಗೌಡ್ತಿ ಎಂದು ಹೇಳುತ್ತಿದ್ದಾರೆ.

ಸುಮಲತ ಗೆದ್ದ ರೀತಿಯನ್ನು ಮುಂದಿಟ್ಟುಕೊಂಡು ರಾಧಿಕಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗುತ್ತಿದೆ.