ಭಾರತೀಯರ ರಕ್ಷಣೆಯಲ್ಲಿ ಸರ್ಕಾರ ವಿಫಲ: ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡ್ತಿದೆ – ಬಿ.ಕೆ ಹರಿಪ್ರಸಾದ್ ಟೀಕೆ.

ಬೆಂಗಳೂರು,ಫೆಬ್ರವರಿ,26,2022(www.justkannada.in): ಭಾರತೀಯರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದ್ದು,  ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ.

ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆ ಕುರಿತು ಮಾತನಾಡಿದ ಬಿ.ಕೆ ಹರಿ ಪ್ರಸಾದ್, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಆದಂತೆ ಭಾರತೀಯರ ರಕ್ಷಣೆಯಲ್ಲಿ ಭಾರತ ವಿಫಲವಾಗಿದೆ. ಸರ್ಕಾರ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡ್ತಿದೆ  ಕಿಡಿಕಾರಿದರು.

ಇನ್ನು ಈ ಕುರಿತು ಮಾತನಾಡಿದ  ಸಂಸದ ಡಿ.ಕೆ ಸುರೇಶ್, ಉಕ್ರೇನ್‌ ರಷ್ಯಾ ಬಿಕ್ಕಟ್ಟಿನ ವಿಚಾರವಾಗಿ ಭಾರತದ ನಿಲುವು ಸರಿಯಲ್ಲ. ಭಾರತದ ನಿಲುವು ತಪ್ಪು. ವಿದೇಶಾಂಗ ನೀತಿ ಸಂಪೂರ್ಣ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Government-failed – protect –Indians-BK Hariprasad