Sunday, October 18, 2026

Dasara Wishes

Happy Dasara
Home Front Page ಕುಮಾರಣ್ಣನೇ ಮಂಡ್ಯ ಮೈತ್ರಿ ಅಭ್ಯರ್ಥಿ – ಮಾಜಿ ಸಚಿವ ಸಿ.ಎಸ್ ಪುಟ್ಟರಾಜು.

ಕುಮಾರಣ್ಣನೇ ಮಂಡ್ಯ ಮೈತ್ರಿ ಅಭ್ಯರ್ಥಿ – ಮಾಜಿ ಸಚಿವ ಸಿ.ಎಸ್ ಪುಟ್ಟರಾಜು.

ಮಂಡ್ಯ,ಮಾರ್ಚ್,21,2024(www.justkannada.in): ಮಂಡ್ಯ  ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್  ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಣ್ಣನೇ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಸ್ ಪುಟ್ಟರಾಜು, ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಣ್ಣನೇ. ನಾನು ಲೋಕಸಭೆ ಚುನಾವಣೆ ನೇತೃತ್ವ ವಹಿಸುತ್ತೇನೆ.  ಪ್ರಚಂಡ ಬಹುಮತದಲ್ಲಿ ಕುಮಾರಣ್ಣನನ್ನ ಗೆಲ್ಲಿಸುತ್ತೇವೆ. ಕುಮಾರಣ್ಣನಿಗೆ ನಾಮಪತ್ರ ಸಲ್ಲಿಸುವುದಕ್ಕೆ ಮಾತ್ರ ಬನ್ನಿ ಎಂದಿದ್ದೇವೆ.  ನಾವೇ ಓಡಾಡಿ ಕುಮಾರಸ್ವಾಮಿ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.ಕುಮಾರಣ್ಣನೇ ಮಂಡ್ಯ ಮೈತ್ರಿ ಅಭ್ಯರ್ಥಿ – ಮಾಜಿ ಸಚಿವ ಸಿ.ಎಸ್ ಪುಟ್ಟರಾಜು cs puttaraju

ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನ ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಮಧ್ಯೆ ಸೀಟು ಹಂಚಿಕೆ ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ ಎನ್ನಲಾಗಿದೆ.

Key words: Kumaraswamy- Mandya -alliance candidate – former minister -CS Puttaraju.