ದಲಿತ ವ್ಯಕ್ತಿ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಕೇಸ್: ಆರು ಮಂದಿ ವಿರುದ್ದ ಪ್ರಕರಣ ದಾಖಲು…

ಚಾಮರಾಜನಗರ,ಜೂ,12,2019(www.justkannada.in):  ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ದಲಿತ ವ್ಯಕ್ತಿ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅರ್ಚಕ ಶಿವಪ್ಪ, ಮಹೇಶ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ಮಾಣಿಕ್ಯ, ಸತೀಶ್, ಮೂರ್ತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಜೂನ್ 3 ರಂದು ಈ ಘಟನೆ ನಡೆದಿದ್ದು, ಕಪ್ಪೆಕಟ್ಟೆ  ದೇಗುಲದಲ್ಲಿ ವಿಗ್ರಹ ಧ್ವಂಸ ಮಾಡಿದ ಆರೋಪದ ಮೇಲೆ  ದಲಿತ ವ್ಯಕ್ತಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿಲಾಗಿತ್ತು.

Key words: chamarajnagar -attack – Dalit person- complaint -Six people