ಟಿಕ್ ಟಾಕ್ ‘ಸ್ಟಾರ್’ಗಳಿಗೆ ರಾಧಿಕಾ ಕುಮಾರಸ್ವಾಮಿ ಆಫರ್ !

ಬೆಂಗಳೂರು, ಸೆಪ್ಟೆಂಬರ್ 25, 2019 (www.justkannada.in): ನಟಿ ರಾಧಿಕಾ ಕುಮಾರಸ್ವಾಮಿ ಅವರ ‘ದಮಯಂತಿ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ.

ಇದೀಗ ಚಿತ್ರತಂಡ ರಾಧಿಕಾರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಈ ಸಿನಿಮಾದ ಟೀಸರ್​ನಲ್ಲಿರುವ ಡೈಲಾಗ್​ಗಳನ್ನು ಅಭಿಮಾನಿಗಳು ಟಿಕ್​ಟಾಕ್ ಮಾಡಿ ಕಳುಹಿಸಬಹುದು.

ಅವುಗಳಲ್ಲಿ ಅತಿಹೆಚ್ಚು ಲೈಕ್ ಪಡೆಯುವ ಟಿಕ್​ಟಾಕ್ ವಿಡಿಯೋ ಮಾಡಿರುವ 10 ಜನರಿಗೆ ‘ದಮಯಂತಿ’ ಸಿನಿಮಾದ ನಾಯಕಿ ರಾಧಿಕಾ ಕುಮಾರಸ್ವಾಮಿ ಜೊತೆ ಕುಳಿತು ಪ್ರೀಮಿಯರ್ ಶೋ ನೋಡುವ ಅವಕಾಶ ಸಿಗಲಿದೆ. ಈ ಬಗ್ಗೆ ಖುದ್ದು ರಾಧಿಕಾ ಕುಮಾರಸ್ವಾಮಿ ವಿಡಿಯೋ ಮೂಲಕ ಆಫರ್ ನೀಡಿದ್ದಾರೆ.