ನಂದಿನಿ ಉತ್ಪನ್ನಗಳನ್ನ ಹಂತ ಹಂತವಾಗಿ ತೆಗೆದು ಹಾಕುವ ಹುನ್ನಾರ-ಸರ್ಕಾರದ ವಿರುದ್ಧ ಡಾ.ಪುಷ್ಪ ಅಮರನಾಥ್ ಕಿಡಿ.

ಮೈಸೂರು,ಏಪ್ರಿಲ್,10,2023(www.justkannada.in):  ರಾಜ್ಯದಲ್ಲಿ ಗುಜರಾತ್ ಮೂಲದ ಅಮುಲ್ ಹಾಲು ಮೊಸರು ಮಾರಾಟಕ್ಕೆ ವಿರೋಧ ವ್ಯಕ್ತವಾಗಿದ್ದು, ನಂದಿನಿ ಉತ್ಪನ್ನಗಳನ್ನ ಬಳಸುವ ಮೂಲಕ ನಂದಿನಿ ಉಳಿಸಿ ಎಂಬ  ಅಭಿಯಾನಗಳು ನಡೆಯುತ್ತಿದೆ.

ಈ ಸಂಬಂಧ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ , ನಂದಿನಿ ನಮ್ಮ ರಾಜ್ಯದ ಹೆಮ್ಮೆ. ನಂದಿನಿ ಉತ್ಪನ್ನಗಳನ್ನ ಹಂತ ಹಂತವಾಗಿ ತೆಗೆದು ಹಾಕುವ ಹುನ್ನಾರ ಇದರ ಹಿಂದಿದೆ. ಹೈನುಗಾರಿಕೆ ಹೆಚ್ಚಿಸಲು ಸಿದ್ದರಾಮಯ್ಯನವರು ಅನೇಕ ಯೋಜನೆಗಳನ್ನ ಜಾರಿ ಮಾಡಿದರು. ಹಾಲಿನ ದರಕ್ಕೆ ಪ್ರೋತ್ಸಾಹ ದನ ನೀಡಿದ್ದು ಸಿದ್ದರಾಮಯ್ಯ.

ನಮ್ಮ ನಂದಿನಿ ಉಳಿವಿಗಾಗಿ ನಮ್ಮ ಹೋರಾಟ ಇದ್ದೆ ಇರುತ್ತೆ. ಬಿಜೆಪಿಯವರು ಎಲ್ಲವನ್ನು ಗುಜರಾತಿಗಳ ಕೈ ಗೆ ಕೊಡಲು ಮುಂದಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

Key words: Dr. Pushpa Amarnath- criticizes- government – Nandini -products