ರಾಜ್ಯದಲ್ಲಿ ಅಮೂಲ್ ಉತ್ಪನ್ನಗಳ ನಿಷೇಧಕ್ಕೆ ಆಗ್ರಹ: ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಟನೆ.

ಮೈಸೂರು,ಏಪ್ರಿಲ್,10,2023(www.justkannada.in): ರಾಜ್ಯದಲ್ಲಿ ನಂದಿನಿ ಹಾಲಿನ ಉತ್ಪನ್ನಗಳಿಗೆ ಮಾರಕವಾಗಲಿರುವ  ಅಮೂಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಡುವೆ ಅಮೂಲ್ ಉತ್ಪನ್ನಗಳ ನಿಷೇಧಕ್ಕೆ ಆಗ್ರಹಿಸಿ ಸರ್ಕಾರದ ನಡೆ ಖಂಡಿಸಿ ಮೈಸೂರಿನಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿಭಟನೆ ನಡೆಯಿತು.

ಒಂಟಿಕೊಪ್ಪಲ್ ಬಳಿ ಇರುವ ಅಮೂಲ್ ಪಾರ್ಲರ್ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ತೊಲಗಿಸಿ ತೊಲಗಿಸಿ ಅಮೂಲ್ ತೊಲಗಿಸಿ, ಉಳಿಸಿ ಉಳಿಸಿ ನಂದಿನಿ ಉಳಿಸಿ ಎಂದು ಘೋಷಣೆ ಕೂಗಿದರು. ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಅಮೂಲ್ ಹಾಲಿನ ಉತ್ಪನ್ನಗಳಿಗೆ ನಿಷೇಧ ಸೇರಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ನಂದಿನ ಹಾಲಿನ ಮಜ್ಜಿಗೆ ಲಸ್ಸಿಗಳನ್ನ ಕೊಟ್ಟು ನಂದಿನಿ ಪರ ಮೈಸೂರಿನ ಜನತೆ ನಿಂತಿದ್ದು, ಪ್ರತಿಭಟನೆಯಲ್ಲಿ ಕನ್ಮಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮು, ಪ್ರೊ.ಕಾಳ ಚೆನ್ನೇಗೌಡ ಸೇರಿದಂತೆ ಹಲವು ಮುಖಂಡರು  ಭಾಗಿಯಾಗಿದ್ದರು.

Key words: ban – Amul -products – state- Kannada Sahitya Parishad- protests -Mysore.