ಸಖತ್ ಕಿಕ್ ಹೊಡೆಸುತ್ತಿದೆ ಶ್ರೀನಿವಾಸ್ ಕೊಟ್ಟ ‘ಓಲ್ಡ್ ಮಾಂಕ್’ !

ಬೆಂಗಳೂರು, ಆಗಸ್ಟ್ 27, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರು ನಟ ಶ್ರೀನಿವಾಸ್ ‘ಶ್ರೀನಿ’ ನಟನೆಯ ‘ಓಲ್ಡ್ ಮಾಂಕ್’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಚಿತ್ರದಲ್ಲಿ ಶ್ರೀನಿಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಆಕ್ಟ್ ಮಾಡಿದ್ದಾರೆ. ಟ್ರೇಲರ್ ನಲ್ಲಿ ಕಾಮಿಡಿ ಪಂಚ್ ವರ್ಕೌಂಟ್ ಆಗಿರುವಂತೆ ಕಂಡುಬರುತ್ತಿದೆ. ಎಸ್. ನಾರಾಯಣ್, ಅರುಣಾ ಬಾಲರಾಜ್ , ಸಿಹಿಕಹಿ ಚಂದ್ರು, ಸುಜಯ್ ಶಾಸ್ತ್ರಿ ಕೂಡ ನಟಿಸಿದ್ದಾರೆ.

‘ಶ್ರೀನಿವಾಸ ಕಲ್ಯಾಣ’, ‘ಬೀರ್ಬಲ್’ ಅಂತಹ ವಿಶಿಷ್ಟ ಸಿನಿಮಾ ಮಾಡಿದ್ದ ಶ್ರೀನಿ ಕೈಚಳಕ ‘ಓಲ್ಡ್ ಮಾಂಕ್’ ನಲ್ಲೂ ಕಂಡು ಬರುತ್ತಿದೆ.

ಚಿತ್ರದ ಟ್ರೇಲರ್ ಗೆ ಪವರ್ ಫುಲ್ ಒಪೆನಿಂಗ್ ಸಿಕ್ಕಿದೆ. ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜತಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.