ಗೋಲ್ಡನ್ ಸ್ಟಾರ್ ‘ಗೀತಾ’ಗೆ U/A ಸರ್ಟಿಫಿಕೇಟ್, 27ಕ್ಕೆ ಚಿತ್ರ ರಿಲೀಸ್

Promotion

ಬೆಂಗಳೂರು, ಸೆಪ್ಟೆಂಬರ್ 17, 2019 (www.justkannada.in):  ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ಗೀತಾ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ.

ಅಂದಹಾಗೆ ಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ. ಮಿಸ್ಟರ್ & ಮಿಸ್ಸಸ್ ರಾಮಾಚಾರಿ’ ಹಾಗೂರಾಜಕುಮಾರ’ ಚಿತ್ರಗಳಿಗೆ ಸಂತೋಷ್ ಆನಂದ ರಾಮ್ ಜೊತೆ ಕಾರ್ಯ ನಿರ್ವಹಿಸಿದ್ದ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಬಿ.ಎಂ ಸಂಭಾಷಣೆ ಬರೆದಿದ್ದಾರೆ. ಆರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ.