ರಿಷಬ್ ಶೆಟ್ಟಿಯ ‘ರುದ್ರ ಪ್ರಯಾಗ’ಕ್ಕೆ ಬಾಲಿವುಡ್ ನಟ ನಾಯಕ !

ಬೆಂಗಳೂರು, ಸೆಪ್ಟೆಂಬರ್ 17, 2019 (www.justkannada.in): ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ರುದ್ರ ಪ್ರಯಾಗ’ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ ಚಿತ್ರಕ್ಕೆ ಬಾಲಿವುಡ್ ನಟರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ.

ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬ್ಯುಸಿ ಇರುವ ಶ್ರದ್ಧಾ ರುದ್ರ ಪ್ರಯಾಗದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆ ಬರುತ್ತಿದ್ದಾರೆ. ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ನಟ ಗುಲ್ ಶನ್ ದೇವಯ್ಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೆ ರಿಷಬ್, ಗುಲ್ ಶನ್ ಜೊತೆ ಮಾತುಕತೆ ನಡೆಸಿದ್ದಾರಂತೆ.ರಿಷಬ್ ಹೇಳಿದ ‘ರುದ್ರ ಪ್ರಯಾಗ’ ಕಥೆ ಕೇಳಿ ಗುಲ್ ಶನ್ ಸಖತ್ ಇಂಪ್ರೆಸ್ ಆಗಿದ್ದಾರಂತೆ.