ಮಲೆಯಾಳಂ ಹಿರಿಯ ನಟ ಸತಾರ್ ನಿಧನ

ಕೊಚ್ಚಿ, ಸೆಪ್ಟೆಂಬರ್ 17, 2019 (www.justkannada.in): ಮಲಯಾಳಂ ಚಿತ್ರರಂಗದ ಹಿರಿಯ ನಟ ಸತಾರ್ (67) ಇಂದು ನಿಧನರಾಗಿದ್ದಾರೆ.

ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಳುವಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೇರಳದ ಎರ್ನಾಕುಲಂ ಜಿಲ್ಲೆಯ ಕಡುಂಗಲ್ಲೂರಿನಲ್ಲಿ ಹುಟ್ಟಿದ ಸರ್ತಾ 1975ರಲ್ಲಿ ಎಂ.ಕೃಷ್ಣನ್ ನಾಯರ್ ನಿರ್ದೇಶನದ ಭರಾಯೆ ಅವಶ್ಯಮುಂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

1976ರಲ್ಲಿ ಅನಾವರಣಂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ 1970 ಮತ್ತು 80ರ ದಶಕದಲ್ಲಿ ವಿಲನ್ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದರು.