ಬಿಜೆಪಿ ನಾಯಕರಿಬ್ಬರಿಂದ ಸಂಚಾರ ನಿಯಮ ಉಲ್ಲಂಘನೆ….

ಕೊಪ್ಪಳ,ಸೆ,17,2019(www.justkannada.in):  ಜನಸಾಮಾನ್ಯರು ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದರೇ ಬೀಳುತ್ತೆ ದಂಡ  ಆದರೆ ರಾಜಕಾರಣಿಗಳು ಸಂಚಾರ ನಿಯಮ ಉಲ್ಲಂಘಿಸಿದ್ರೆ ಯಾಕೆ ದಂಡ ಇಲ್ಲ ಎಂಬ ಪ್ರಶ್ನೆಗೆ ಇಲ್ಲೊಂದು ನಡೆದ ಘಟನೆ ಸಾಕ್ಷಿಯಾಗಿದೆ.

ಹೌದು, ರಾಜ್ಯದ ಇಬ್ಬರು ಬಿಜೆಪಿ ನಾಯಕರು ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ವಿಧಿಸಿಲ್ಲ. ಕೊಪ್ಪಳದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷಣ ಸವದಿ ಅವರು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸಂಚಾರ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದರು.

ಇನ್ನು ಸೀಟ್ ಬೆಲ್ಟ್ ಧರಿಸದ ಡಿಸಿಎಂ ಲಕ್ಷಣ ಸವದಿ ಅವರು ಕಾರ್ ಇಳಿಯುತ್ತಿದ್ದಂತೆ ಎಸ್‍ಪಿ ಹಾಗೂ ಡಿಸಿ ಹೂಗುಚ್ಚ ನೀಡಿ ಬರ ಮಾಡಿಕೊಂಡಿದ್ದಾರೆ. ಸೀಟ್ ಬೆಲ್ಟ್ ಧರಿಸದಿದ್ದರೆ ಟ್ರಾಫಿಕ್ ನಿಯಮದ ಪ್ರಕಾರ ಒಂದು ಸಾವಿರ ದಂಡ ವಿಧಿಸಬೇಕಾಗುತ್ತದೆ. ಆದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೂ ಕೂಡ ಸ್ಥಳದಲ್ಲಿದ್ದ ಪೊಲೀಸರು ಏನು ಮಾಡದಿರುವುದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

Key words: koppal-Traffic violation – BJP leaders