ಜಿಲ್ಲಾ ಉಸ್ತುವಾರಿ ಬಗ್ಗೆ ಮನಸ್ತಾಪವಿಲ್ಲ: ಶ್ರೀರಾಮ ಅಣ್ಣ ಇದ್ದ ಕಡೆ ಲಕ್ಷ್ಮಣ ಇರ್ತಾನೆ ಎಂದ ಡಿಸಿಎಂ ಲಕ್ಷ್ಮಣ್ ಸವದಿ…

ಬಳ್ಳಾರಿ,ಸೆ,17,2019(www.justkannada.in):  ಬಳ್ಳಾರಿ ಜಿಲ್ಲಾ ಉಸ್ತುವಾರಿ ಕೈತಪ್ಪಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾವುದೇ ಮನಸ್ಥಾಪವಿಲ್ಲ. ಶ್ರೀರಾಮ ಅಣ್ಣ ಇದ್ದ ಕಡೆ ಲಕ್ಷ್ಮಣ ಇರ್ತಾನೆ ಎಂದು ಹೇಳಿದರು.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ,  ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ನಾನು ಶ್ರೀರಾಮುಲು ಜತೆ ಮಾತಾಡಿದ್ದೇನೆ. ಅವರು ಸಂತೋಷವಾಗಿ ಬಳ್ಳಾರಿಗೆ ಆಹ್ವಾನ ನೀಡಿದ್ದಾರೆ. ಅಣ್ಣ ರಾಮುಲು ಇರುವ ಕಡೆ ತಮ್ಮ ಲಕ್ಷ್ಮಣನಿಗೆ ಯಾವ ತೊಂದರೆ ಇಲ್ಲ. ನಮ್ಮೆಲ್ಲರ ಉದ್ದೇಶ ಇಡೀ ರಾಜ್ಯದ ಅಭಿವೃದ್ಧಿ. ಎಲ್ಲರ ಸಹಕಾರದೊಂದಿಗೆ ಬಳ್ಳಾರಿ‌ ಮಾದರಿ ಜಿಲ್ಲೆಯಾಗಿಸಲು ಶಕ್ತಿ‌ಮೀರಿ ಪ್ರಯತ್ನಿಸುತ್ತೇನೆ  ಎಂದು ಹೇಳಿದರು.

 ನನಗೆ ಸಚಿವ ಸ್ಥಾನ ಮತ್ತು ಡಿಸಿಎಂ ಸ್ಥಾನ ಅನಿರೀಕ್ಷಿತವಾಗಿ ಬಂದಿದ್ದು. ನನಗೆ ಬಳ್ಳಾರಿ ಉಸ್ತುವಾರಿ ನೀಡಿದ್ದ ಬಗ್ಗೆ ನನ್ನ ಮತ್ತು ಶ್ರೀರಾಮುಲು ಅವರ ನಡುವೆ ಯಾವುದೇ ಮನಸ್ತಾಪವಿಲ್ಲ. ಎಲ್ಲರ ಸಹಕಾರದಿಂದ ಜಿಲ್ಲೆಯನ್ನ ಮಾದರಿ ಜಿಲ್ಲೆಯಾಗಿ ಮಾಡಲು ಯತ್ನಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.

Key words: district – no displeasure-shriramulu-in charge minister-ballari-lakshman savadi