ಕೌನ್ ಬನೇಗಾ ಕರೋಡ್ ಪತಿ: ಒಂದು ಕೋಟಿ ಗೆದ್ದ ಸರಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ

ಬೆಂಗಳೂರು, ಸೆಪ್ಟೆಂಬರ್ 17, 2019 (www.justkannada.in): ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಪ್ರಸ್ತುತ ಪ್ರಸಾರವಾಗುತ್ತಿರುವ 11 ನೇ ಆವೃತ್ತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಬಬಿತಾ ತಾಡೆ ಎಂಬ ಮಹಿಳೆ ಕೆಬಿಸಿಯಲ್ಲಿ ಕೋಟಿ ರೂಪಾಯಿ ಗೆದ್ದಿದ್ದಾರೆ.

ನಾನು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸ ಮಾಡಿ ತಿಂಗಳಿಗೆ 1,500 ರೂ. ಮಾತ್ರ ಸಂಪಾದಿಸುತ್ತೇನೆ. ಶಾಲೆಯಲ್ಲಿ ಮಕ್ಕಳಿಗಾಗಿ ಕಿಚಡಿ ಮಾಡಿಕೊಡುತ್ತೇನೆ. ಇಷ್ಟು ದೊಡ್ಡ ಮೊತ್ತದ ಹಣ ಗಳಿಸುತ್ತೇನೆ ಎಂಬುದನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಬಬಿತಾ ಹೇಳಿದ್ದಾರೆ.