ಶಾರುಖ್ ​ಖಾನ್ ​ಒಡೆತನದ 70 ಕೋಟಿ ರೂ. ಆಸ್ತಿ ವಶಪಡಿಸಿಕೊಂಡ ಇಡಿ

ನವದೆಹಲಿ, ಫೆಬ್ರವರಿ 05, 2019 (www.justkannada.in): ಶಾರುಖ್ ​ ಖಾನ್ ​ ಒಡೆತನದ ಕೋಲ್ಕತಾ ನೈಟ್ ​ ರೈಡರ್ಸ್ ​ ಮತ್ತು ರೋಸ್ ​ ವ್ಯಾಲಿ ಗ್ರೂಪ್ ​ ಗೆ ಸೇರಿದ 70.11 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ( ಇಡಿ ) ವಶಕ್ಕೆ ಪಡೆದುಕೊಂಡಿದೆ.

ರೋಸ್ ​ ವ್ಯಾಲಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯ ರಾಮನಗರ ಮತ್ತು ಮಹಿಶದಲ್ ​ ನಲ್ಲಿ 24 ಎಕೆರೆ ಜಮೀನು ವಶಕ್ಕೆ ಪಡೆಯಲಾಗಿದೆ .

ಮುಂಬೈನಲ್ಲಿ ದಿಲ್ಕಾಪ್ ಛೇಂಬರ್ಸ್ ​, ಕೋಲ್ಕತಾದ ಜ್ಯೋತಿ ಬಸು ನಗರದಲ್ಲಿನ 1 ಎಕರೆ ಭೂಮಿ , ಐಶಾರಾಮಿ ಹೋಟೆಲ್ ​ ಹಾಗೂ ಇವುಗಳಿಗೆ ಸಂಬಂಧಿಸಿದ 16.20 ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್ ​ ಅನ್ನು 2002 ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿ ( ಪಿಎಂಎಲ್ ‌ ಎ ) ವಶಕ್ಕೆ ಪಡೆಯಲಾಗಿದೆ .

ಅಲ್ಲದೇ ಈ ಹಗರಣದಲ್ಲಿ ಶಾರುಖ್ ​ ಒಡೆತನದ ಐಪಿಎಲ್ ​ ಕ್ರಿಕೆಟ್ ​ ಟೀಂ ನೈಟ್ ​ ರೈಡರ್ಸ್’ಗೆ ಸಂಬಂಧಿಸಿದ ಒಂದು ಆಸ್ತಿಯನ್ನ ಇಡಿ ವಶಕ್ಕೆ ಪಡೆದಿದೆ.