ಕ್ರಿಕೆಟಿಗ ಹರ್ಭಜನ್​ ಸಿನಿಮಾದ ಫಸ್ಟ್ ಲುಕ್ ರಿಲೀಸ್ !

ಬೆಂಗಳೂರು, ಫೆಬ್ರವರಿ 05, 2019 (www.justkannada.in): ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕ್ರಿಕೆಟಿಗ ಹರ್ಭಜನ್​ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ.

ಇಷ್ಟು ದಿನ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಹರ್ಭಜನ್ ಇದೇ ಮೊದಲ ಬಾರಿಗೆ ಹೀರೋ ಆಗಿ ಮಿಂಚಲಿದ್ದಾರೆ. ಅವರ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.

ಹರ್ಭಜನ್​ ಅಭಿನಯದ ಸಿನಿಮಾಗೆ ‘ಫ್ರೆಂಡ್​ಶಿಪ್​’ ಎಂದು ಶೀರ್ಷಿಕೆ ನೀಡಲಾಗಿದೆ. ಕಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜಾನ್ ಪೌಲ್ ಹಾಗೂ ಶ್ಯಾಮ್ ಸೂರ್ಯ ನಿರ್ದೇಶಿಸುತ್ತಿದ್ದಾರೆ.

ಜೆ.ಪಿ ಆರ್ ಮತ್ತು ಸ್ಟಾಲಿನ್ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಭಜ್ಜಿಗೆ ನಾಯಕಿಯಾಗಿ ಲೋಸ್ಲಿಯಾ ಮರಿಯನೇಸನ್​ ನಟಿಸುತ್ತಿದ್ದಾರೆ.