‘ಬಾಕ್ಸಿಂಗ್’ ಶೂಟಿಂಗ್ ಮುಗಿಸಿದ ‘ಅಣ್ಣಾವ್ರ’ ಕುಡಿ ವಿನಯ್

ಬೆಂಗಳೂರು, ಫೆಬ್ರವರಿ 05, 2019 (www.justkannada.in):ಕರಮ್ ಚಾವ್ಲಾ ನಿರ್ದೇಶಿಸಿ ವಿನಯ್ ರಾಜ್ ನಟಿಸಿರುವ ’10’ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. ಈ ಸಿನಿಮಾದಲ್ಲಿ ವಿನಯ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಯಾವುದೇ ರೀತಿಯ ಗದ್ದಲವಿಲ್ಲದೇ ನಾವು ಶೂಟಿಂಗ್ ಮುಗಿಸಿದ್ದೇವೆ, ಸಿನಿಮಾ ಶೂಂಟಿಂಗ್ ಪೂರ್ಣವಾಗಿ ಮುಗಿದ ನಂತರವಷ್ಟೇ ಸಿನಿಮಾ ಸಂಬಂಧಿತ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿನಯ್ ತಿಳಿಸಿದ್ದಾರೆ.

ಬಾಕ್ಸರ್ ಪಾತ್ರದಲ್ಲಿ ನಟಿಸಿರುವುದು ತುಂಬಾ ಹೊಸ ಅನುಭವ ನೀಡಿದೆ. ಸಿನಿಮಾಗಾಗಿ ಸುಮಾರು 5ರಿಂದ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು. ಈಗಲೂ ಕೂಡ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುತ್ತಿರುವುದಾಗಿ ವಿನಯ್ ರಾಜ್ ಹೇಳಿದ್ದಾರೆ.