ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್

ಹ್ಯಾಮಿಲ್ಟನ್, ಫೆಬ್ರವರಿ 05, 2019 (www.justkannada.in): ಪ್ರವಾಸಿ ಭಾರತ ವಿರುದ್ಧದ ಟಿ-20 ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ನ್ಯೂಝಿಲೆಂಡ್ ಕ್ರಿಕೆಟ್ ತಂಡ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಅತಿಥೇಯರನ್ನು ಬ್ಯಾಟಿಂಗ್‌ಗೆ ಇಳಿಸಿದೆ. ಉತ್ತಮ ಅರಂಭದ ಭರವಸೆ ಮೂಡಿಸಿದ್ದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್‌ವಾಲ್ ಅವರ ವಿಕೆಟ್ ಪಡೆಯುವ ಮೂಲಕ ಅತಿಥೇಯರು ಆರಂಭಿಕ ಮೇಲುಗೈ ಹೊಂದಿದ್ದಾರೆ.

ಸದ್ಯ ಭಾರತ 43 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ (ನಾಟೌಟ್ 101) ಚೊಚ್ಚಲ ಶತಕ ಗಳಿಸಿದ್ದಾರೆ.

ಮೊದಲ ಬಾರಿಗೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ (20) ಹಾಗೂ ಮಯಾಂಕ್ ಅಗರ್‌ವಾಲ್ (32) ಉತ್ತಮ ಆರಂಭ ಒದಗಿಸುವ ಭರವಸೆ ಮೂಡಿಸಿದರು. ಆದರೆ ಸತತ ಎರಡು ಓವರ್‌ಗಳಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಭಾರತದ ನಾಗಾಲೋಟಕ್ಕೆ ಕಡಿವಾಣ ಬಿದ್ದಿದೆ.