ಸರಸ್ವತಿ ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ: ಫೋಟೋ ಆಯ್ತು ವೈರಲ್

ಬೆಂಗಳೂರು, ಫೆಬ್ರವರಿ 05, 2019 (www.justkannada.in): ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರಿ ಸರಸ್ವತಿ ಪೂಜೆ ಮಾಡಿ ಪಕ್ಕಾ ಹಿಂದೂ ಸಂಪ್ರದಾಯಸ್ಥ ಹುಡುಗಿಯಂತೆ ವೇಷ ತೊಟ್ಟುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ.

ಮೂಲತಃ ಇಸ್ಲಾಂ ಧರ್ಮೀಯರಾದ ಶಮಿ ಹಿಂದೂ ಧರ್ಮದ ಆಚರಣೆ ಮಾಡಿದ ಪುತ್ರಿಯ ಫೋಟೋ ಪ್ರಕಟಿಸಿದ್ದಕ್ಕೆ ಹಲವರು ಅವರ ವಿಶಾಲ ಹೃದಯವನ್ನು ಕೊಂಡಾಡಿದರೆ, ಮತ್ತೆ ಕೆಲವು ಸಂಪ್ರದಾಯವಾದಿಗಳು ಕೆಂಗಣ್ಣು ಬೀರಿದ್ದಾರೆ.

ಶಮಿ ನೀವು ಮುಸ್ಲಿಂ. ಮಗಳಿಗೂ ಇಸ್ಲಾಂ ಧರ್ಮದ ವೇಷ ಹಾಕಿಸಿ. ಖುರಾನ್ ನಲ್ಲಿ ಹೇಳಿದಂತೆ ನಡೆದುಕೊಳ್ಳಿ ಎಂದು ಸಂಪ್ರದಾಯವಾದಿಗಳು ಶಮಿಗೆ ಪಾಠ ಮಾಡಿದರೆ, ಮತ್ತೆ ಕೆಲವರು ನಿಮ್ಮ ನಡೆ ಪಕ್ಕಾ ಭಾರತೀಯತೆಯನ್ನು ಸೂಚಿಸುತ್ತದೆ ಎಂದು ಹೊಗಳಿದ್ದಾರೆ.