ಭಾರತ ಕಿರಿಯರ ಕ್ರಿಕೆಟ್’ನಲ್ಲಿ ‘ಪಾನಿಪುರಿ’ ಹುಡುಗನ ಸಾಧನೆ ಮೆಚ್ಚಿದ ಕ್ರಿಕೆಟ್ ಅಭಿಮಾನಿಗಳು

ಬೆಂಗಳೂರು, ಫೆಬ್ರವರಿ 05, 2019 (www.justkannada.in): ದಕ್ಷಿಣ ಆಫ್ರಿಕಾದ ಪಾಟ್ ಜೇಫ್ ಸ್ಟೋಮ್ ನಲ್ಲಿ ನಡೆದ ಅಂಡರ್ 19 ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭರ್ಜರಿ ಜಯಗಳಿಸಿದ ಭಾರತ ತಂಡ ಫೈನಲ್ ಪ್ರವೇಶಿಸಿದೆ.

ಈ ಮೂಲಕ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಭಾರತ ತಂಡ ಸತತ ಮೂರನೇ ಬಾರಿ ಒಟ್ಟಾರೆ 7 ಬಾರಿ ಕಿರಿಯರ ವಿಶ್ವಕಪ್ ನಲ್ಲಿ ಫೈನಲ್ ತಲುಪಿದೆ. ಸತತ 11ನೇ ಜಯ ದಾಖಲಿಸಿದೆ.

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಜೈಸ್ವಾಲ್ ಮೂರು ಅರ್ಧಶತಕ, ಒಂದು ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಐದು ವರ್ಷದಿಂದ 49 ಸೆಂಚುರಿ ಸಿಡಿಸಿದ್ದಾರೆ.

ಉತ್ತರಪ್ರದೇಶದ ಬದೋಹಿ ಜಿಲ್ಲೆಯ ಭೂಪೆಂದ್ರ ಜೈಸ್ವಾಲ್ ಪುತ್ರರಾಗಿರುವ ಯಶಸ್ವಿ ಜೈಸ್ವಾಲ್ ಮುಂಬೈನಲ್ಲಿ ವಾಸವಾಗಿ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡುತ್ತಿದ್ದರು. ಈ ಮೂಲಕವೇ ಕ್ರಿಕೆಟ್ ಕನಸು ಕಂಡ ಜೈಸ್ವಾಲ್ ಭಾರತ ಕಿರಿಯರ ತಂಡದ ಬೆನ್ನೆಲುಬಾಗಿದ್ದಾರೆ.