ಸಿದ್ಧರಾಮಯ್ಯ ವರುಣಾದಿಂದಲೇ ಸ್ಪರ್ಧಿಸುತ್ತಾರೆ- ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ.

ತಿಪಟೂರು,ಮಾರ್ಚ್,18,2023(www.justkannada.in):  ಕೋಲಾರದಿಂದ ಸ್ಪರ್ಧಿಸದಂತೆ ಸಿದ್ಧರಾಮಯ್ಯಗೆ ಸೂಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಿದ್ಧರಾಮಯ್ಯ ವರುಣಾದಿಂದಲೇ ಸ್ಪರ್ಧಿಸುತ್ತಾರೆ. ಈ ಹಿಂದೆಯೂ ಹೀಗೆಯೇ ಹೇಳಿದ್ದೆ. ಬಹುಶಃ ನನ್ನ ಮಾತು ನಿಜವಾಗಬಹುದು ಎಂದು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ,  ಸಿದ್ಧರಾಮಯ್ಯ ವರುಣಾದಿಂದಲೇ ಸ್ಪರ್ಧಿಸುತ್ತಾರೆ  ಎಂದು ಹಿಂದೆಯೇ ನಾನು ಹೇಳಿದ್ದೆ. ಆದರೆ ಸಿದ್ಧರಾಮಯ್ಯ ಅನಗತ್ಯವಾಗಿ ಕೋಲಾರ  ಸ್ಪರ್ಧೆ ಮಾಡುತ್ತೇನೆ ಎಂದಿದ್ದರು.  ಸಿದ್ಧರಾಮಯ್ಯ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ನನ್ನ ಮಾತು ನಿಜವಾಗಬಹುದು. ಪಟ್ಟಿ ಬಿಡುಗಡೆಯಾದ ಮೇಲೆ ಗೊತ್ತಾಗುತ್ತೆ.. ಸಿದ್ಧರಾಮಯ್ಯ ಅನಗತ್ಯವಾಗಿ ಗೊಂದಲ ಸೃಷ್ಠಿಸುವ ಅಗತ್ಯವಿರಲಿಲ್ಲ.  ಯಾಕೆ ಗೊಂದಲ ಮೂಡಿಸಿದ್ರೂ ಗೊತ್ತಿಲ್ಲ ಎಂದರು.

135ರಿಂದ 140 ಸ್ಥಾನ ಗೆದ್ದು ನಾವೇ ಸರ್ಕಾರ ರಚನೆ ಮಾಡುತ್ತೇವೆ. ಜನಸಂಕಲ್ಪಯಾತ್ರೆಗೆ ಜನಬೆಂಬಲ ಸಿಗುತ್ತಿದೆ ಎಂದು ಬಿಎಸ್ ವೈ ಹೇಳಿದರು. ಸಚಿವ ಸೋಮಣ್ಣ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರು.

Key words: Siddaramaiah -will -contest – Varuna- former CM- BS Yeddyurappa.