Saturday, September 19, 2026

BDA Apartments

ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ… BDA JK_Adv BDA Adv
Home Front Page ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ…

ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ…

ವಿಜಯಪುರ,ಫೆ,5,2020(www.justkannada.in): ಪರೋಕ್ಷವಾಗಿ ತಮ್ಮ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ರಮೇಶ್ ಜಿಗಜಿಣಗಿ ನಾಯಕರೇ ಅಲ್ಲ. ನಮ್ಮ ಬಗ್ಗೆ ಮಾತನಾಡುವ ಅಧಿಕಾರ ಅವರಿಗಿಲ್ಲ. ಅವರು ನಮಗೆ ಸರ್ಟಿಫಿಕೇಟ್ ಕೊಡುವುದು ಬೇಡ. ಅವರ ಸರ್ಟಿಫಿಕೇಟ್ ನಿಂದ ನಾವು ಶಾಸಕ, ಸಂಸದರಾಗಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಹಾದಿ ಬೀದಿಯಲ್ಲಿ ಮಾತನಾಡೋದು ಸರಿನಾ? ಈ ರೀತಿ ತಲೆ ಇಲ್ಲದವರು ಹೇಳುತ್ತಾರೆ ಅಷ್ಟೇ ಎಂದು ರಮೇಶ್ ಜಿಗಜಿಣಗಿ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕಿಡಿಕಾರಿದ್ದರು.

Key words: Basanagowda Patil yatnal – MP Ramesh jigajinagi-vijaypur