ದೇಶಾದ್ಯಂತ ಸಂಭ್ರಮದಿಂದ ಬೆಳಕಿನ ಹಬ್ಬ ದೀಪಾವಳಿ ಆಚರಣೆ

ಬೆಂಗಳೂರು, ನವೆಂಬರ್ 12, 2023 (www.justkannada.in): ಬೆಳಕಿನ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ದೇಶದೆಲ್ಲೆಡೆ ಬೆಳಕಿನ ಹಬ್ಬವನ್ನು ದೀಪಗಳನ್ನು ಹಚ್ಚಿ-ಪಟಾಕಿ ಹೊಡೆದು ಆಚರಿಸಲಾಗುತ್ತಿದೆ. ಪಟಾಕಿ ಬಳಕಗೆ ಕಡಿವಾಣ ಹಾಕಿರುವುದರಿಂದ ಹಸಿರು ಪಟಾಕಿಗಳನ್ನು ಹಚ್ಚಿ ಮಕ್ಕಳು ಸಂಭ್ರಮಿಸುತ್ತಿದ್ದಾರೆ.

ಇನ್ನು ದೀಪಾವಳಿ ಐತಿಹಾಸಿಕ ಹಿನ್ನೆಲೆ ನೋಡುವುದಾದರೆ, ಲಂಕಾದ ರಾಜ ರಾವಣನನ್ನು ಸೋಲಿಸಿ 14 ವರ್ಷಗಳ ವನವಾಸವನ್ನು ಕಳೆದ ನಂತರ ಭಗವಾನ್ ರಾಮನು ಸೀತಾಮಾ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿದ್ದನ್ನು ದೀಪಾವಳಿ ಸೂಚಿಸುತ್ತದೆ.

ದೀಪಾವಳಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತದೆ. ದೇಶಾದ್ಯಂತ ಆಚರಿಸಲಾಗುತ್ತದೆ. ದೇಶದ ಹೊರಗಿನ ಭಾರತೀಯರು ಸಹ ಈ ಹಬ್ಬವನ್ನು ಗುರುತಿಸಿ ಸಂಭ್ರಮಿಸುವ ಏಕೀಕೃತ ಆಚರಣೆಯಾಗಿದೆ.

ಇದರೊಂದಿಗೆ ದೀಪಾವಳಿ ಆಧ್ಯಾತ್ಮಿಕ ‘ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯ’ವನ್ನು ಸಂಕೇತಿಸುತ್ತದೆ.