“ಕರ್ನಾಟಕವನ್ನು ಅಗ್ರಿ ಸ್ಟಾರ್ಟಪ್ ಹಬ್ ಆಗಿಸುವ ಗುರಿಯಿದೆ : ಸಚಿವ ಬಿ.ಸಿ.ಪಾಟೀಲ್”

ಬೆಂಗಳೂರು,ಫೆಬ್ರವರಿ,10,2021(www.justkannada.in) : ಕರ್ನಾಟಕ ರಾಜ್ಯವನ್ನು “ಅಗ್ರಿ ಸ್ಟಾರ್ಟಪ್’ಹಬ್ ಆಗಿಸುವ ಮಹತ್ತರ ಗುರಿ ಹೊಂದಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

jkಎಫ್ ಐ ಸಿಸಿ ಶೃಂಗಸಭೆ ಪಾಲ್ಗೊಂಡು ಕೃಷಿ ನವೋದ್ಯಮಿಗಳಿಗೆ ಅನ್ ಲೈನ್ ಮೂಲಕ ಪ್ರಶಸ್ತಿ ಪ್ರದಾನ ಮಾಡಿ ಸಚಿವರು ಮಾತನಾಡಿದರು.

ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಸ್ಟಾರ್ಟಪ್ ಹಬ್ ಗಳ ಸ್ಥಾಪನೆ

ರಾಜಧಾನಿ ಬೆಂಗಳೂರು ಸ್ಟಾರ್ಟಪ್ ಹಬ್ ಎಂದೇ ಪ್ರಖ್ಯಾತಿ ಹೊಂದಿದೆ. 6ಸಾವಿರ ಸ್ಟಾರ್ಟಪ್ ಗಳಿದ್ದರೂ ಸಹ ಬಹಳ ಕಡಿಮೆ ಸಂಖ್ಯೆಯಲ್ಲಿ ಅಗ್ರಿ ಸ್ಟಾರ್ಟಪ್ ಗಳಿವೆ. ಕೃಷಿಗೆ ಮತ್ತು ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಅಗ್ರಿ ಸ್ಟಾರ್ಟಪ್ ಹಬ್ ಗಳನ್ನು ಸ್ಥಾಪಿಸಿ ಬೆಂಗಳೂರನ್ನು ಅಗ್ರಿ ಸ್ಟಾರ್ಟಪ್ ಹಬ್ ಅನ್ನಾಗಿಸುವ ಗುರಿ ಹೊಂದಿರುವುದಾಗಿ ಹೇಳಿದರು.

ಅಗ್ರಿ ಸ್ಟಾರ್ಟಪ್ ಗಳು ಕೃಷಿಯಲ್ಲಿ ಸರಪಳಿಯಂತೆ ಕೆಲಸ ಮಾಡುತ್ತಿದ್ದು, ಇದರಿಂದ ರೈತರಿಗೂ ಹಾಗೂ ಗ್ರಾಹಕರಿಗೂ ದಕ್ಷ ಹಾಗೂ ನವೀನ ಉತ್ಪನ್ನಗಳು, ತಂತ್ರಜ್ಞಾನ ಸೇವೆಗಳು ಲಭ್ಯವಾಗಲಿದೆ. ಬೆಂಗಳೂರನ್ನು ಸ್ಟಾರ್ಟ್ ಅಪ್ ಗಳ ಕೇಂದ್ರವಾಗಿ ಪರಿಗಣಿಸಿ ಮತ್ತು ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು, ಕೃಷಿ ಇಲಾಖೆಯಿಂದ ಬೆಂಗಳೂರಿನಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳ ಕುರಿತು ಕಾರ್ಯಾಗಾರ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.

ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಉದ್ದೇಶ

ಸರ್ಕಾರದ ನೀತಿ ಹಾಗೂ ಪರಿವರ್ತನೆಯ ಬದಲಾವಣೆಗೆ ತಕ್ಕಂತೆ ಉದ್ಯಮಗಳು ಬದಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿಯನ್ನು ಕೃಷಿ ಉದ್ಯಮವನ್ನು ವೃದ್ಧಿಸಬೇಕಿದೆ. ಕೃಷಿಯನ್ನು ಉದ್ಯಮವನ್ನಾಗಿಸಲು ಕೃಷಿಕರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ಆರಂಭಿಸುವುದಕ್ಕಾಗಿ ಕೃಷಿ ನವೋದ್ಯಮ ನೀತಿಗಳನ್ನು ರೂಪಿಸಿ ಅದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ವರದಿ ನೀಡಿದೆ. ಅಗ್ರಿ ಸ್ಟಾರ್ಟಪ್ ಸಮಿತಿಯು ನೀಡಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ವಿವರಿಸಿದರು.

ಇತರೆ ಸ್ಟಾರ್ಟಪ್ ಗಳ ಮಾದರಿಯಲ್ಲಿಯೇ ಕೃಷಿ ನವೋದ್ಯಮ (ಅಗ್ರಿ ಸ್ಟಾರ್ಟಪ್)ವನ್ನು ಸಹ ಹೆಚ್ಚಿಸಬೇಕಿದೆ. ಭಾರತೀಯ ಕೃಷಿಯಲ್ಲಿ ಸುಸ್ಥಿರ ಮತ್ತು ನವೀನತೆ ಕಲ್ಪಿಸಲು ಎಫ್ಐಸಿಸಿಐ ವಿವಿಧ ವಿಭಾಗಗಳಿಂದ ಕೃಷಿ ಸ್ಟಾರ್ಟ್ ಅಪ್ ಗಳನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.

ಎಫ್.ಐ.ಸಿ.ಸಿ. ಕರ್ನಾಟಕ ರಾಜ್ಯ ಕೌನ್ಸಿಲ್ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಅಗ್ರಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸುವ ಸಂಬಂಧ ಚರ್ಚಿಸಿದ್ದು, ಅದರಂತೆ ಕರ್ನಾಟಕದಲ್ಲಿ ಸೂಕ್ತವಾದ ಕೃಷಿ ಪರಿಸರ ವ್ಯವಸ್ಥೆ ಮತ್ತು ಅಗ್ರಿ ಸ್ಟಾರ್ಟ್ ಅಪ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಗ್ರಿ ಸ್ಟಾರ್ಟಪ್ ವೃದ್ಧಿಗೆ ಸರ್ಕಾರದ ಜೊತೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿರುವುದಾಗಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.Karnataka,aims,become,agri,startup hub,Minister,B.C.Patilಕೃಷಿ ನವೋದ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಫ್.ಐ.ಸಿ.ಸಿ.ಐ ಪ್ರಧಾನ ಕಾರ್ಯದರ್ಶಿ ದಿಲೀಪ್ ಚೆನೋಯ್, ಮುಖ್ಯಸ್ಥ ಪ್ರವೇಶ್ ಶರ್ಮಾ, ರಾಷ್ಟ್ರೀಯ ಕೃಷಿ ಸಮಿತಿ ಮತ್ತು ಸಮೂಹ ಸಂಸ್ಥೆ ಅಧ್ಯಕ್ಷ ಟಿ.ಆರ್.ಕೇಶವನ್, ಅಗ್ರಿ ಸ್ಟಾರ್ಟಪ್ ಕಾರ್ಯಪಡೆ ಮುಖ್ಯಸ್ಥ ರವೀಂದ್ರ ಅಗರ್ವಾಲ್ ಸೇರಿದಂತೆ ಮತ್ತಿತ್ತರು ಪಾಲ್ಗೊಂಡಿದ್ದರು.

key words : Karnataka-aims-become-agri-startup hub-Minister-B.C.Patil