Sunday, August 23, 2026

BDA Apartments

Home Front Page ವಿಶ್ವಕಪ್ ಕ್ರಿಕೆಟ್: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ನೆದರ್ಲೆಂಡ್ಸ್ ಕೊನೆ ಲೀಗ್ ಪಂದ್ಯ

ವಿಶ್ವಕಪ್ ಕ್ರಿಕೆಟ್: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ನೆದರ್ಲೆಂಡ್ಸ್ ಕೊನೆ ಲೀಗ್ ಪಂದ್ಯ

ಬೆಂಗಳೂರು, ನವೆಂಬರ್ 12, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂತಿಮ ಲೀಗ್ ಪಂದ್ಯವನ್ನಾಡಲು ಟೀಮ್ ಇಂಡಿಯಾ ಸಜ್ಜಾಗಿದ್ದು, ಇಂದು ನೆದರ್ಲೆಂಡ್ಸ್ ತಂಡ ಭಾರತಕ್ಕೆ ಎದುರಾಳಿಯಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಿಮ ಲೀಗ್ ಪಂದ್ಯ ನಡೆಯಲಿದೆ. ಈಗಾಗಲೇ ಸೆಮಿಫೈನಲ್ ಗೆ ಅರ್ಹತೆ ಖಚಿತವಾಗಿರುವುದರಿಂದ ಇಂದಿನ ಪಂದ್ಯ ಅಷ್ಟೇನು ಮಹತ್ವ ಪಡೆದಿಲ್ಲ.

ನೆದರ್ಲೆಂಡ್ಸ್ ತಂಡ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯ ಗೆದ್ದುಕೊಂಡಿದ್ದರೂ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲುಣಿಸಿ ಶಾಕ್ ನೀಡಿದೆ. ಹೀಗಾಗಿ ಭಾರತ ತಂಡ ನೆದರ್ಲೆಂಡ್ಸ್ ವಿರುದ್ಧ ಎಚ್ಚರ ತಪ್ಪುವಂತಿಲ್ಲ.

ಇಂದಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಇರಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.