ಸಿಬಿಎಸ್ಇ 10 ಮತ್ತು 12 ನೇ ತರಗತಿ ವಾರ್ಷಿಕ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ

ಬೆಂಗಳೂರು, ನವೆಂಬರ್ 12, 2023 (www.justkannada.in): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿ ವಾರ್ಷಿಕ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟಿಸಲಾಗಿದೆ.

ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳು ಜನವರಿ 1, 2024 ರಿಂದ ಪ್ರಾರಂಭವಾಗಲಿವೆ. ಫೆಬ್ರವರಿ 15ರಿಂದ ವಾರ್ಷಿಕ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ.

ಇದರ ಜತೆಗೆ ಚಳಿಗಾಲದ ಶಾಲೆಗಳು ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್ 14 ರ ಮಂಗಳವಾರದಿಂದ ನಡೆಸುತ್ತವೆ ಮತ್ತು ಡಿಸೆಂಬರ್ 14, 2023 ರಂದು ಕೊನೆಗೊಳ್ಳುತ್ತವೆ.

ಸಿಬಿಎಸ್‌ಇ ಅಧಿಕೃತ ವೆಬ್ಸೈಟ್: www.cbse.gov.in ಮತ್ತು cbse.nic.in,ಗೆ ಭೇಟಿ ನೀಡಿ ಸಿಬಿಎಸ್‌ಇ 10 ನೇ ತರಗತಿ ವೇಳಾಪಟ್ಟಿ ಮತ್ತು ಸಿಬಿಎಸ್‌ಇ 12 ನೇ ತರಗತಿ ವೇಳಾಪಟ್ಟಿಯನ್ನು ತಿಳಿಯಬಹುದಾಗಿದೆ.