Sunday, August 23, 2026

BDA Apartments

Home Cinema ಅಪಘಾತ ಪ್ರಕರಣ: ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್’ಶೀಟ್ ಸಲ್ಲಿಕೆ, ನಟ ನಾಗಭೂಷಣ್’ಗೆ ಸಂಕಷ್ಟ

ಅಪಘಾತ ಪ್ರಕರಣ: ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್’ಶೀಟ್ ಸಲ್ಲಿಕೆ, ನಟ ನಾಗಭೂಷಣ್’ಗೆ ಸಂಕಷ್ಟ

ಬೆಂಗಳೂರು, ನವೆಂಬರ್ 12, 2023 (www.justkannada.in): ನಟ ನಾಗಭೂಷಣ್ ಮಾಡಿದ್ದಾರೆ ಎನ್ನಲಾದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಸಾಕ್ಷಿಗಳನ್ನು ಒಳಗೊಂಡ ಸುಮಾರು 80 ಪುಟಗಳ ಚಾರ್ಜ್ ಶೀಟನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಕುಮಾರಸ್ವಾಮಿ ಟ್ರಾಫಿಕ್ ಠಾಣೆ ಪೊಲೀಸರು 80 ಪುಟುಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 60 ಸಾಕ್ಷಿಗಳನ್ನು ಕಲೆಹಾಕಲಾಗಿದೆ.

ಅಪಘಾತದ ವೇಳೆ ಪ್ರೇಮ ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಪತಿ ಕೃಷ್ಣ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಮುಖ್ಯವಾಗಿ ಕೃಷ್ಣಾ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.

‘ವೇಗವಾಗಿ ಬಂದ ಕಾರು ಫುಟ್​ಪಾತ್‌ ಮೇಲೆ ಹೋಗುತಿದ್ದ ನಾನು ಮತ್ತ ನನ್ನ ಪತ್ನಿ ಪ್ರೇಮ ಅವರಿಗೆ‌ ಡಿಕ್ಕಿ ಯಾಗಿತ್ತು’ ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ. ಇನ್ನು, ಆರ್​ಟಿಒ ಅಧಿಕಾರಿಗಳು ವರದಿ ನೀಡಿದ್ದಾರೆ.

ಕಾರಿನಲ್ಲಿ ಯಾವ ಲೋಪವೂ ಆಗಿರಲಿಲ್ಲ. ಅಜಾಗರೂಕತೆಯಿಂದ ಮತ್ತು ಅತಿವೇಗದಿಂದ ಅಪಘಾತ ಓಡಿಸಿದ್ದಕ್ಕೆ ಅಪಘಾತವಾಗಿದೆ ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ.