Tuesday, September 22, 2026

BDA Apartments

Home Front Page ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳ ವಿತರಣೆ.

ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳ ವಿತರಣೆ.

ಹುಣಸೂರು,ಆಗಸ್ಟ್,13,2022(www.justkannada.in): ಲಾ ಗೈಡ್ ಕಾನೂನು ಮಾಸ ಪತ್ರಿಕೆಯ ಸಂಪಾದಕ ವಕೀಲ ವೆಂಕಟೇಶ್ ಅವರು ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಸಾಮಗ್ರಿಗಳನ್ನು ಮತ್ತು ಸಮವಸ್ತ್ರ ವಿತರಣೆ ಮಾಡಿದರು.

ಇದೇ ಸಮಯದಲ್ಲಿ  10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಮೊದಲ ಬಹುಮಾನ 5,000, ಎರಡನೇ ಬಹುಮಾನ 3000, ಮೂರನೇ ಬಹುಮಾನ 25000ಗಳನ್ನು ನೀಡಲಾಯಿತು.

ಬಳಿಕ ಮಾತನಾಡಿದ  ಲಾ ಗೈಡ್ ಕಾನೂನು ಮಾಸಪತ್ರಿಕೆ ಸಂಪಾದಕರಾದ ವೆಂಕಟೇಶ್, ಕ್ರೀಡಾಪಟುಗಳು ಇತ್ತೀಚಿನ ದಿನಗಳಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ  ನೀಡಿದರು. ಹಾಗೆಯೇ ಪ್ರತಿವರ್ಷ 10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಎಂ ಬಿ ಲಲಿತಮ್ಮ ಹಾಗೂ ನಿಂಗೇಗೌಡ ಅವರ ನೆನಪಿನಾರ್ಥವಾಗಿ ಬಹುಮಾನ ನೀಡಲಾಗುವುದು ಎಂದು  ತಿಳಿಸಿದರು.ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ law guied

ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಅವರು ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವುದು ಬಹು ಮುಖ್ಯ. ಸೋಲು ಗೆಲುವುಗಳನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸುವುದರೊಂದಿಗೆ ಕ್ರೀಡಾಭಿಮಾನವನ್ನು ಮೆರೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದಾರಾ ಮಹೇಶ್,  ಮಾಜಿ ಚೇರ್ಮನ್ ಮರಿಲಿಂಗೇಗೌಡ, ರಮೇಶ್ ವೀರಣ್ಣ ಕರಡಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Key words: Distribution -free uniforms, -sports- equipment –students-Law Guide – magazine