ಮಹಿಳೆಯರ ಬಗ್ಗೆ ಅಗೌರವ ಸರಿಯಲ್ಲ- ಪ್ರಿಯಾಂಕ್ ಖರ್ಗೆ  ಹೇಳಿಕೆಗೆ ಸಚಿವ ಶ್ರೀರಾಮುಲು ಗರಂ.

kannada t-shirts

ಬಳ್ಳಾರಿ,ಆಗಸ್ಟ್,13,2022(www.justkannada.in):  ಮಹಿಳೆಯರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ  ಕುರಿತು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದು ಕ್ಷಮೆಯಾಚಿವಂತೆ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಪ್ರಿಯಾಂಕ್ ಖರ್ಗೆ ನಾಲಿಗೆ ಮೇಳೆ ಹತೋಟಿ ಇರಲಿ. ಮಹಿಳೆಯರ ಬಗ್ಗೆ ಅಗೌರವ ತೊರುವುದು ಸರಿಯಲ್ಲ. ಲಂಚ, ಮಂಚ ಅಂತ ಹೇಳುವುದು ಹೀನಾಯ ಸಂಸ್ಕೃತಿಯನ್ನು ತೋರಿಸುತ್ತದೆ. ಪ್ರಿಯಾಂಕ್​ ಖರ್ಗೆ ಅವರು ಸಂಸ್ಕಾರವಂತ ಅಂತ ಅಂದುಕೊಂಡಿದ್ದೆ. ಈ ಹಿಂದೆ ಸದನದಲ್ಲಿ ಸಣ್ಣ ಖರ್ಗೆ ಎಂದು ಉಲ್ಲೇಖಿಸಿ ಹೊಗಳಿದ್ದೆ. ಆದರೆ ಅವರು ತಮ್ಮ ತಂದೆಯನ್ನು ನೋಡಿ ಕಲಿಯಬೇಕಿದೆ. ಪ್ರಿಯಾಂಕ್ ಅವರ ತಂದೆ ಬುದ್ದಿವಂತರು. ದಲಿತ ನಾಯಕರ ಮಗನಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ.

ಶಕ್ತಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಯತ್ನಿಸಲಿ. ಮಹಿಳೆಯರ ವಿರುದ್ಧ ಇಂತಹ ಮಾತು ಬಳಕೆ ಆಗಬಾರದು. ಕೂಡಲೇ ಪ್ರಿಯಾಂಕ್​ ಖರ್ಗೆ ಅವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

Key words: Minister- Sriramulu – Priyank Kharge’s -statement.

website developers in mysore