Wednesday, September 30, 2026

BDA Apartments

ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕು- ಪ್ರಮೋದ್ ಮುತಾಲ...
Home Front Page ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕು- ಪ್ರಮೋದ್ ಮುತಾಲಿಕ್ ಆಗ್ರಹ.

ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕು- ಪ್ರಮೋದ್ ಮುತಾಲಿಕ್ ಆಗ್ರಹ.

ದಾವಣಗೆರೆ,ಆಗಸ್ಟ್,13,2022(www.justkannada.in): ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್, ಗಲಭೇ ಪ್ರಚೋದನೆ ಇಲ್ಲದೇ ನಿರ್ವಹಿಸುತ್ತೇವೆ ಯಾವುದೇ ನಿಯಮ ಇಲ್ಲದೇ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು. ಅನುಮತಿ ಪಡೆಯಲು ಅಲೆದಾಡಬೇಕು. ಹೀಗಾಗಿ ಒಂದೆ ಕಡೆ ಕೌಂಟರ್ ಮಾಡಿ ಅನುಮತಿ ನೀಡಿ. ನಮಾಜ್ ಮಾಡಲು ಅವಕಾಶ ನೀಡುತ್ತೀರಿ.  ಹಾಗೆಯೇ  ನಮಗೆ ಗಣೇಶೊತ್ಸವಕ್ಕೆ ಮುಕ್ತ ಅವಕಾಶ ನೀಡಿ ಎಂದು ಒತ್ತಾಯಿಸಿದರು.

ಈದ್ಗಾ ಮೈದಾನ ಈಗ ಸರ್ಕಾರಿ ಜಾಗವಾಗಿದೆ.  ಜಮೀರ್, ಮುಸ್ಲಿಂ ನಾಯಕರ,  ಬಾಯಿ ಬಂದ್ ಆಗಿದೆ. ಜಮೀರ್ ಕೇವಲ  ಮುಸ್ಲಿಂರಿಗೆ ಶಾಸಕರಲ್ಲ. ಚಾಮರಾಜಪೇಟೆಗೆ ಶಾಸಕ. ನೀವೇ ಮುಂದೆ ನೀಂತು ಗಣೇಶೋತ್ಸವ ಮಾಡಿಸಬೇಕು ಎಂದು  ಪ್ರಮೋದ್ ಮುತಾಲಿಕ್ ತಿಳಿಸಿದರು.

Key words: Ganesh festival  – given- free-permission -Pramod Muthalik