Wednesday, August 12, 2026

BDA Apartments

Home Front Page ಕೇರಳ ಮತ್ತು ಕೊಡಗು ಜಿಲ್ಲೆ ನಡುವೆ ಬಸ್ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ.

ಕೇರಳ ಮತ್ತು ಕೊಡಗು ಜಿಲ್ಲೆ ನಡುವೆ ಬಸ್ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ.

ಕೊಡಗು,ಆಗಸ್ಟ್,8,2021(www.justkannada.in):  ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮತ್ತು ಕೊಡಗು ನಡುವಿನ ಬಸ್ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಚಾರುಲತಾ  ಸೋಮಲ್ ಆದೇಶ ಹೊರಡಿಸಿದ್ದಾರೆ.

ಕೇರಳ ರಾಜ್ಯದಿಂದ ಬಸ್ ಗಳು ಕೊಡಗು ಜಿಲ್ಲೆಗೆ ಬರುವಂತಿಲ್ಲ. ಕೊಡಗು ಜಿಲ್ಲೆಯಿಂದ ಕೇರಳಗೆ ಬಸ್ ಗಳು ಸಂಚರಿಸುವಂತಿಲ್ಲ. ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.  ಜಿಲ್ಲೆಯ ಗಡಿಗಳಲ್ಲಿ ಇರುವ ಚೆಕ್‌ ಪೋಸ್ಟ್‌ಗಳಲ್ಲಿ ಅಂತಾರಾಜ್ಯ ಪ್ರಯಾಣಿಕರನ್ನು ವಿಶೇಷವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಡಿಸಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

Key words: DC -order -bus –between- Kerala – Kodagu