ವೀಕೆಂಡ್ ಲಾಕ್‌ಡೌನ್ ಗೆ ಸಹಕರಿಸಿ – ಸಚಿವ ಸೋಮಶೇಖರ್ ಮನವಿ : ನಿಯಮ ಮೀರಿ ವಹಿವಾಟು ನಡೆಸಿದರೆ ಕೇಸ್- ಪೊಲೀಸ್ ಆಯುಕ್ತರ ಎಚ್ಚರಿಕೆ.

 

ಮೈಸೂರು, ಆ.07, 2021 : (www.justkannada.in news ) ವೀಕೆಂಡ್ ಲಾಕ್‌ಡೌನ್ ಗೆ ಮೈಸೂರಿನಲ್ಲಿ ಸಂಘಟನೆಗಳ ವಿರೋಧ ಹಿನ್ನೆಲೆ. ನಾಳೆ ಒಂದು ದಿನ ಸಹಕರಿಸುವಂತೆ ಸಚಿವ ಎಸ್‌.ಟಿ.ಸೋಮಶೇಖರ್ ಮನವಿ.

ಸರ್ಕಾರ ಆದೇಶ ಮಾಡಿದೆ. ಅದನ್ನು ನಾವು ಉಲ್ಲಂಘನೆ ಮಾಡಲು ಆಗಲ್ಲ. ಮೈಸೂರು ಹಾಗೂ ಚಾಮರಾಜನಗರ ಪರಿಸ್ಥಿತಿಯನ್ನು ಸಿಎಂ ಗಮನಕ್ಕೆ ತರುತ್ತೇನೆ. ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಇರುವುದರಿಂದ ಕೆಲವು ಸಡಿಲಿಕೆ ಮಾಡುವಂತೆ ಕೇಳಿಕೊಳ್ಳುತ್ತೇನೆ. ವರ್ತಕರು ಅಲ್ಲಿಯ ವರೆಗೆ ತಾಳ್ಮೆ ವಹಿಸಬೇಕು. ಸೋಮವಾರದಿಂದ ಎಂದಿನಂತೆ ವ್ಯಾಪಾರ ಮಾಡಲು ಅವಕಾಶ ಇರುತ್ತೆ. ಎರಡು ದಿನ ಸಹಕರಿಸುವಂತೆ ಸೋಮಶೇಖರ್ ಮನವಿ.

ವೀಕೆಂಡ್ ಕರ್ಫ್ಯೂ ಮೀರಿ ವರ್ತಕರು ವಹಿವಾಟು ನಡೆಸಲು ನಿರ್ಧಾರ ಹಿನ್ನೆಲೆ. ಸರ್ಕಾರದ ಆದೇಶವನ್ನು ಮೀರದಂತೆ ಮೈಸೂರು ಸಿಟಿ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮನವಿ. ನಿಯಮ ಮುರಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ. ಲಾಕ್‌ಡೌನ್ ನಿಯಮ ಮೀರಿ ವಹಿವಾಟ ನಡೆಸಿದರೆ ಕೇಸ್ ಹಾಕಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಅಂತಹವರ ಲೈಸನ್ಸ್ ಮುಟ್ಟುಗೋಲು ಹಾಕಿಕೊಂಡು ಕ್ರಮ. ಸರ್ಕಾರ ಜನರ ಹಿತದೃಷ್ಟಿಯಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಮುಂದಿನ ನಡಾವಳಿಗಳು ಬರುವ ವರೆಗೂ ವರ್ತಕರು ಸಹಕರಿಸಬೇಕು. ಇಲ್ಲವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

key words : mysore-city-police-lock.down-minister-request