Friday, August 21, 2026

BDA Apartments

Home Front Page ಹಿಜಾಬ್ ವಿವಾದ ಖಂಡಿಸಿ ‘ಕೈ’ ನಾಯಕ ರಾಹುಲ್ ಗಾಂಧಿ ಟ್ವೀಟ್.

ಹಿಜಾಬ್ ವಿವಾದ ಖಂಡಿಸಿ ‘ಕೈ’ ನಾಯಕ ರಾಹುಲ್ ಗಾಂಧಿ ಟ್ವೀಟ್.

ನವದೆಹಲಿ,ಫೆಬ್ರವರಿ,5,2022(www.justkannada.in):  ರಾಜ್ಯದಲ್ಲಿ ಸಾಕಷ್ಟು ಸದ್ಧು ಮಾಡುತ್ತಿರುವ ಕೇಸರಿ, ಹುಜಾಬ್ ವಿವಾದ ಇದೀಗ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಹಿಜಾಬ್ ವಿವಾದ ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಶಿಕ್ಷಣದ ಮಧ್ಯೆ ಹಿಜಾಬ್ ವಿವಾದ ತರಲಾಗಿದೆ. ನಾವು ಹೆಣ್ನು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದೀವಿ. ಭಾರತದ ಹೆಣ್ಣುಮಕ್ಕಳ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ. ಹಿಜಾಬ್ ಗೆ ಅಡ್ಡಿ ಪಡಿಸಿದ್ದರಿಂದ  ಅವರ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ.

ಸರಸ್ವತಿ ಮಾತೆ ಎಲ್ಲರಿಗೂ ಜ್ಞಾನ ನೀಡುತ್ತಾಳೆ ಬೇದವಿಲ್ಲ. ಸರಸ್ವತಿ ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Key words: Congress leader -Rahul Gandhi- Hijab controversy