ಮೆಕ್‌ ಡೊನಾಲ್ಡ್ಸ್‌ ನ ಮಾಸ್ಟರ್ ಫ್ರಾಂಚೈಸಿ ವೆಸ್ಟ್ ಲೈಫ್ ಡೆವಲಪ್‌ ಮೆಂಟ್ ಸಂಸ್ಥೆಯ ಆದಾಯದಲ್ಲಿ ಹೆಚ್ಚಳ

ಬೆಂಗಳೂರು,ಫೆಬ್ರವರಿ,5,2022(www.justkannada.in):  ಮೆಕ್‌ಡೊನಾಲ್ಡ್ಸ್‌ನ ರೆಸ್ಟೋರೆಂಟ್‌ ನ ಮಾಸ್ಟರ್ ಫ್ರಾಂಚೈಸಿಯಾದ ವೆಸ್ಟ್‌ ಲೈಫ್‌ ಡೆವಲಪ್‌ಮೆಂಟ್ ಸಂಸ್ಥೆಯ ಡಿಸೆಂಬರ್ ಅಂತ್ಯಕ್ಕೆ ತ್ರೈಮಾಸಿಕ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ.

ಇಂದೆಂದೂ ಕಾಣದಷ್ಟೂ ಉತ್ತಮ ಫಲಿತಾಂಶವನ್ನು ವೆಸ್ಟ್‌ ಲೈಫ್ ಡೆವಲಪ್‌ಮೆಂಟ್ ಸಂಸ್ಥೆ ಸಾಧಿಸಿದೆ.  4,763.8 ಮಿಲಿಯನ್ ನಷ್ಟು ಆದಾಯ ಕಂಡುಬಂದಿದ್ದು, ಇದು ಶೇ. 46.7ರಷ್ಟು ಹೆಚ್ಚಳ ಎನ್ನಲಾಗಿದೆ. ಇನ್ನು ವಾರ್ಷಿಯ ಆದಾಯದಲ್ಲೂ 836.2 ಮಿಲಿಯನ್ ಕಂಡು ಬಂದಿದ್ದು,  ಇದು ಶೇ. 61ರಷ್ಟು ಹೆಚ್ಚಳವಾಗಿದೆ. ಇನ್ನೂ ರೆಸ್ಟೋರೆಂಟ್ ಆಪರೇಟಿಂಗ್ ಮಾರ್ಜಿನ್ ಶೇ.60.3ರಷ್ಟು ಏರಿಕೆಯಾಗಿದ್ದು, 1,075 ಮಿಲಿಯನ್‌ ಗೆ ತಲುಪಿದೆ. ಜೊತೆಗೆ ಮೆಕ್‌ ಡೊನಾಲ್ಡ್ಸ್‌ನ ಡೆಲಿವರಿಯಲ್ಲೂ ಆದಾಯ  ಹೆಚ್ಚಳವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ವೆಸ್ಟ್ ಲೈಫ್ ಡೆವಲಪ್‌ ಮೆಂಟ್ ಲಿಮಿಟೆಡ್‌ ನ ಉಪಾಧ್ಯಕ್ಷ ಅಮಿತ್ ಜತಿಯಾ, ನಮ್ಮ ಸಂಸ್ಥೆ ಹಿಂದೆಂದೂ ಕಾಣದ ಆದಾಯವನ್ನು ಗಳಿಸಿರುವುದು ಅತ್ಯಂತ ಸಂತಸದ ವಿಷಯ. ಈ ಕೋವಿಡ್ ಸಮಯದಲ್ಲಿ ಈ ಸಾಧನೆ ಅನಿರೀಕ್ಷಿತ. ಆದರೆ, ಎಲ್ಲಾಸಿಬ್ಬಂದಿಗಳ ಶ್ರಮದಿಂದಾಗಿ ನಮಗೆ ಈ ಫಲಿತಾಂಶ ಸಿಕ್ಕಿದೆ ಎಂದುರು.

ಡಿಸೆಂಬರ್‌ ವರೆಗಿನ ತ್ರೈಮಾಸಿಕದಲ್ಲಿ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ 8 ಹೊಸ ಮೆಕ್‌ ಡೊನಾಲ್ಡ್ಸ್‌ ರೆಸ್ಟೋರೆಂಟ್ ತೆಗೆದಿದ್ದು, ಒಟ್ಟು 316 ಶಾಖೆಗಳನ್ನು ಹೊಂದಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಶಾಖೆಯನ್ನು 500 ಗಡಿ ದಾಟಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 500 ರಿಂದ ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ವೆಸ್ಟ್ ಲೈನ್‌ನ ಬ್ರಾಂಡ್ ಅಂಬಾಸಿಡರ್ ರಶ್ಮಿಕಾ ಮಂದಣ್ಣ ಅವರೊಂದಿಗೆ ಈ ತ್ರೈಮಾಸಿಕ ಫಲಿತಾಂಶವನ್ನು  ಘೋಷಿಸಿದೆ. ಅವರಿಗೂ ಸಹ ಧನ್ಯವಾದವನ್ನು ಅರ್ಪಿಸಿದೆ. ಈ ತ್ರೈಮಾಸಿಕದಲ್ಲಿ ಕಂಪನಿ ಸಾಕಷ್ಟು ಹೊಸ ಅನ್ವೇಷಣೆಗಳನ್ನು ನಡೆಸಿದೆ. ಅದರಲ್ಲಿ ಹೊಸ ಗೌರ್ವೆಂಟ್ ಬರ್ಗರ್, ಫ್ರೈಡ್ ಚಿಕನ್ ಫ್ಲಾಟ್‌ಫಾರ್ಮ್, ಮ್ಯಾಕ್‌ ಕೆಫೆ ಇತರೆ ಹೊಸ ಮೆನುಗಳನ್ನು ಪರಿಚಯಿಸಿತು. ಇದು ಗ್ರಾಹಕರಿಗೆ ಹೆಚ್ಚು ಮೆಚ್ಚುಗೆಯಾಗಿದೆ.

ಮುಂದಿನ ದಿನಗಳಲ್ಲಿ ಸಂಸ್ಥೆಯ ಹಣಕಾಸಿನ ಫಲಿತಾಂಶವನ್ನು ಇನ್ನೂ ಎತ್ತರದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಹಾಗೂ ಗ್ರಾಹಕರಿಗೆ ಇಷ್ಟದ ರೀತಿಯ ಮೆನುಗಳನ್ನು ಪರಿಚಯಿಸಲಾಗುವುದು ಎಂದರು.

Key words: McDonald’s- Master Franchisee -West Life Development -Company