ಹಿಜಾಬ್ ಗೆ ಸರ್ಕಾರ ಅವಕಾಶ ನೀಡಲ್ಲ: ಶಿಕ್ಷಣ ಬೇಡದವರು ಬೇರೆ ದಾರಿ ನೋಡಿಕೊಳ್ಳಬಹುದು – ನಳೀನ್ ಕುಮಾರ್ ಕಟೀಲ್

ಮಂಗಳೂರು,ಫೆಬ್ರವರಿ,5,2022(www.justkannada.in):  ರಾಜ್ಯದಲ್ಲಿ ಹಿಜಾಬ್, ಕೇಸರಿಶಾಲು ವಿವಾದ ತೀವ್ರ ಸ್ವರೂಪ ಪಡೆದಿದ್ದು   ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದ ಸರ್ಕಾರವಿದೆ.  ಹಿಜಾಬ್ ಗೆ ಸರ್ಕಾರ ಅವಕಾಶ ನೀಡಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಮಕ್ಕಳಿಗೆ ಅಗತ್ಯ ಇರೋದು ಶಿಕ್ಷಣ  ಯಾರಿಗೆ ಶಿಕ್ಷಣ ಬೇಡವೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು.  ರಾಜ್ಯವನ್ನು ತಾಲಿಬಾನ್ ಮಾಡಲು ಬಿಡಲ್ಲ. ಇಲ್ಲಿನ  ನಿಯಮ ನಿರ್ಧಾರಕ್ಕೆ ಬದ್ಧವಾಗಿರಬೇಕು. ಹಿಜಾಬ್ ಗೆ ಸರ್ಕಾರ ಅವಕಾಶ ನೀಡಲ್ಲ   ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದು ತಪ್ಪು. ಈ ಮೂಲಕ ಜನರ ನಡುವಿನ ಸಾಮರಸ್ಯ ಕದಡಿದ್ದರು ಎಂದು ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

Key words: hijab- bjp-nalin kumar katil