ಕಾಲುಜಾರಿ ನದಿಗೆ ಬಿದ್ದು ಯುವಕ ನಾಪತ್ತೆ: ಸ್ಥಳಕ್ಕೆ ಆಗಮಿಸದ ಅಧಿಕಾರಗಳ ವಿರುದ್ಧ ಆಕ್ರೋಶ.

ರಾಮನಗರ,ಆಗಸ್ಟ್,8,2021(www.justkannada.in):  ಕಾಲು ಜಾರಿ ನದಿಗೆ ಬಿದ್ದು ಯುವಕ ನಾಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಚೌಕಹಳ್ಳಿ ಗ್ರಾಮದ ನಿವಾಸಿಯಾಗಿರುವ ಕೌಶಿಕ್( 27) ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ಯುವಕ. ಕೌಶಿಕ್ ನಿನ್ನೆ ಪಕ್ಕದ ಊರಿನಿಂದ ಬರುತ್ತಿರುವ ವೇಳೆ ಕಾಲುಜಾರಿ ವೃಷಭಾವತಿ ನದಿಗೆ ಬಿದ್ದಿದ್ದಾನೆ. ನಂತರ ಯುವಕ ಕಾಣೆಯಾಗಿದ್ದು ಪೋಷಕರು ಊರಿನ ಗ್ರಾಮಸ್ಥರು ಹಾಗೂ  ಪಕ್ಕದ ಊರಿನ ಗ್ರಾಮಸ್ಥರು ಸೇರಿ ರಾತ್ರಿಯಿಂದ ಶೋಧಕಾರ್ಯ ಮಾಡುತ್ತಿದ್ದಾರೆ.

ಆದರೆ ಇಂತಹ ಸಂದರ್ಭದಲ್ಲೂ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡದೆ ನಿರ್ಲಕ್ಷ್ಯ  ತೋರಿದ್ದಾರೆ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: young –death-river-ramanagar-not -arrived – spot-officer