Wednesday, August 5, 2026

BDA Apartments

Home Front Page ಕೊರೊನಾ ವೈರಸ್; ರೂಮರ್ಸ್ ನಂಬಬೇಡಿ, ಡೌಟ್ ಇದ್ರೆ ಟೆಸ್ಟ್ ಮಾಡಿಸಿಕೊಳ್ಳಿ: ಮೋದಿ ಸಲಹೆ

ಕೊರೊನಾ ವೈರಸ್; ರೂಮರ್ಸ್ ನಂಬಬೇಡಿ, ಡೌಟ್ ಇದ್ರೆ ಟೆಸ್ಟ್ ಮಾಡಿಸಿಕೊಳ್ಳಿ: ಮೋದಿ ಸಲಹೆ

ನವದೆಹಲಿ, ಮಾರ್ಚ್ 7, 2020 (www.juskannada.in): ಕೊರೊನಾ ವೈರಸ್​ ಬಗ್ಗೆ ಯಾರೂ ಭಯ ಪಡಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ, ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ದೇಶದಲ್ಲಿ ಒಟ್ಟು 31 ಜನರಲ್ಲಿ ಕೊರೊನಾ ವೈರಸ್​ ದೃಢಪಟ್ಟಿದೆ. ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಇದರೊಂದಿಗೆ ಜನರಲ್ಲಿ ಆತಂಕವೂ ಅಧಿಕವಾಗುತ್ತಿದೆ. ಏನೇ ಸಣ್ಣ ಶೀತವಾದರೂ ಕೊರೊನಾ ಇರಬಹುದಾ ಎಂಬ ಅನುಮಾನವೇ ಕಾಡುತ್ತಿದೆ. ಹಾಗೇ ಕೊರೊನಾ ಬಗ್ಗೆ ಇಲ್ಲಸಲ್ಲದ ಗಾಳಿಸುದ್ದಿಗಳೂ ಹಬ್ಬುತ್ತಿವೆ. ರೂಮರ್ ವಿಷಯದಲ್ಲಿ ಎಚ್ಚರಿಕೆಯಿಂದ ಇರೋಣ.. ಡೌಟ್ ಇಂದ್ರೆ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದು ಸಲಹೆ ನೀಡಿದ್ದಾರೆ.