ನಂಜನಗೂಡು ತಾಲೂಕಲ್ಲಿ ಚಿರತೆ ದಾಳಿಯಿಂದ ಸಾಕು ನಾಯಿ ರಕ್ಷಿಸಿದ ಮಾಲೀಕ

ಮೈಸೂರು, ಮಾರ್ಚ್ 7, 2020 (www.juskannada.in): ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ಚಿರತೆ ದಾಳಿಯಿಂದ ಸಾಕು ನಾಯಿಯನ್ನುಮಾಲೀಕ ರಕ್ಷಿಸಿದ್ದಾನೆ.

ಗ್ರಾಮದ ರೈತ ರಘುರವರ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಯಿ ಚೀರಾಟದ ಶಬ್ದ ಕೇಳಿ ಹೊರಬಂದ ಮಾಲೀಕ ರಘು ಈ ವೇಳೆ ನಾಯಿಯನ್ನು ಎಳೆದುಕೊಂಡು ಹೋಗುತ್ತಿದ್ದ ಚಿರತೆ ಓಡಿಸಿ ಸಾಕು ನಾಯಿಯನ್ನು ಕಾಪಾಡಿದ್ದಾರೆ.

ಚಿರತೆ ಕಚ್ಚಿದ ಹಿನ್ನೆಲೆಯಲ್ಲಿ ನಾಯಿಯ ಕತ್ತಿನ ಭಾಗದಲ್ಲಿ ಗಾಯವಾಗಿದೆ. ಕಳೆದ ಒಂದು ವಾರದಿಂದ ತೋಟದ ಮನೆಯಲ್ಲಿದ್ದ ಹಲವಾರು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿದ್ದವು.

ರಾತ್ರಿ ವೇಳೆ ಜಮೀನಿಗೆ ಚಿರತೆ ದಾಳಿಯಿಂದಾಗಿ ಬೆಳೆಗಳನ್ನು ಕಾವಲು ಕಾಯಲು ತೆರಳುವುದಕ್ಕೆ ಭಯ ಭೀತರಾಗಿರುವ ರೈತರು. ಈ ಬಗ್ಗೆ ದೂರು ನೀಡಿದರೂ ಗಮನಹರಿಸದ ಅರಣ್ಯ ಇಲಾಖೆ ಅಧಿಕಾರಿಗಳು ಎಂದು ದೂರಿದ್ದಾರೆ.