1985ರಿಂದಲೂ ಕಾಂಗ್ರೆಸ್ ಮನೆಯ ಬಾಗಿಲು ತೆಗೆದಿದೆ: ಪಕ್ಷಕ್ಕೆ ಬರುವುದಾದರೆ ಯಾರೂ ಕದ್ದು ಬರಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ತುಮಕೂರು,ಡಿಸೆಂಬರ್,29,2023(www.justkannada.in): ಬಿಜೆಪಿ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ತಮ್ಮನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, 1985ರಿಂದಲೂ ಕಾಂಗ್ರೆಸ್ ಮನೆಯ ಬಾಗಿಲು ತೆಗೆದಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾರಾದರೂ ಸರಿ ಬರುವುದಾದರೆ ಕದ್ದು ಬರಲ್ಲ ಎಂದು ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕ್ಷೇತ್ರದ ಕೆಲಸಕ್ಕಾಗಿ ಮನೆಗೆ ಬಂದಿದ್ದರು.  ಭೇಟಿ ಬಗ್ಗೆ ಬೇರೆ ಅರ್ಥ ಬೇಡ ಕಾಂಗ್ರೆಸ್ ಗೆ  ಬರುವುದಾದರೇ ಕದ್ದು ಬರಲ್ಲ. ಕಾಂಗ್ರೆಸ್ ಗೆ ಯಾರೇ ಬಂದರೂ ಸ್ವಾಗತ.  ಕಾಂಗ್ರೆಸ್  ಮನೆಯ ಬಾಗಿಲು ಯಾವಾಗಲೂ ತೆರೆದಿರುತ್ತೆ. 1985ರಿಂದಲೂ ಬಾಗಿಲು ತೆಗೆದಿದೆ. ಬರೋರು ಬರ್ತಾರೆ ಹೋಗೀರು ಹೋಗುತ್ತಾರೆ. ಬಾಗಿಲು ಮುಚ್ಚಲ್ಲ ಎಂದರು.

ಹೊಸ ವರ್ಷಾಚರಣೆ ಮಾರ್ಗಸೂಚಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್,  ತಾಂತ್ರಿಕ ಸಲಹಾ ಸಮಿತಿ ಮಾಡಿದ್ದೇವೆ. ತಜ್ಞರ ಸಲಹೆ ಆಧರಿಸಿ ಸೂಚನೆ ನೀಡುತ್ತೇವೆ.  ಕೊರೋನಾ ಉಪತಳಿ ಬಗ್ಗೆ ಭಯ ಬೇಡ.  60 ವರ್ಷ ಮೇಲ್ಪಟ್ಟವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಹೆಚ್ಚಿನ ಜನ ಒಟ್ಟಿಗೆ ಸೇರುವಂತಿಲ್ಲ. ಎಲ್ಲಾ ಆಸ್ಪತ್ರೆಯಲ್ಲೂ 20 ಬೆಡ್ ಮೀಸಲಿಡಲು ಸೂಚನೆ ನೀಡಲಾಗಿದೆ.

Key words: Congress –odoor –open- come – Home Minister- Dr. G. Parameshwar.