ಸ್ವಪಕ್ಷದ ವಿರುದ್ದವೇ ಯತ್ನಾಳ್ ಅಸಮಾಧಾನ: ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ ಏನು ಗೊತ್ತೆ..?

ಬೆಂಗಳೂರು,ಡಿಸೆಂಬರ್,29,2023(www.justkannada.in):  ಸ್ವಪಕ್ಷದ ವಿರುದ್ದವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ವಿ ಸದಾನಂದಗೌಡರು, ಯತ್ನಾಳ್ ವಿರುದ್ದ ನಾವು ಕ್ರಮ ಕೈಗೊಳ್ಳಲ್ಲ.  ಯತ್ನಾಳ್ ವಿಚಾರವನ್ನ ಹೈಕಮಾಂಡ್ ಗೆ  ತಿಳಿಸಿದ್ದೇವೆ.  ಯತ್ನಾಳ್ ವಿರುದ್ದ ಕೇಂದ್ರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಬಿಜೆಪಿ ಪದಾಧಿಕಾರಿಗಳ ನೇಮಕಕ್ಕೆ ಅಪಸ್ವರ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ವಿ ಸದಾನಂದಗೌಡರು,   ನೂರಾರು  ತಪ್ಪುಗಳಿಂದ ಚುನವಣೆಯಲ್ಲಿ ಸೋಲನುಭವಿಸಬೇಕಾಯಿತು.  ಬೇಗ ಪಟ್ಟಿ ಕಳುಹಿಸಿ ಎಂದು ಹೈಕಮಾಂಡ್ ಸೂಚಿಸಿತ್ತು. ಕೆಲವರ ಜೊತೆ ಚರ್ಚಿಸಿ ಪಟ್ಟಿ ಕಳುಹಿಸಿದ್ದಾರೆ.  ಜಿಲ್ಲಾಧ್ಯಕ್ಷರ ನೇಮಕಕ್ಕೂ ಮುನ್ನ ಚರ್ಚಿಸಬೇಕಿತ್ತು. ರಾಜ್ಯ ಘಟಕಕ್ಕಿಂತ ಜಿಲ್ಲಾ ಘಟಕ ಪ್ರಮುಖವಾದದ್ದು ಎಂದು ತಿಳಿಸಿದರು.

Key words: Basana gowda patil Yatnal- displeasure- against -DV Sadanand Gowda-reaction