ನೀವೇನು ಟಾಟಾ ಬಿರ್ಲಾ ಸಂಬಂಧಿಕರ..? ಮಾಜಿ ಶಾಸಕಗೆ ಕಾಂಗ್ರೆಸ್ ಕಾರ್ಪೋರೇಟರ್ ತಿರುಗೇಟು.

ಮೈಸೂರು, ಫೆ.19, 2021 : ಎಸ್.ಟಿ ಮೀಸಲಾತಿಯಿಂದ ನಾನು ಗೆದ್ದಿದ್ದು. ನಮ್ಮ ವಾರ್ಡಿನ ಎಲ್ಲಾ ಜನ ನನ್ನನ್ನ ಗೆಲ್ಸಿದ್ದು. ಮಾಜಿ ಶಾಸಕ ಎಂ.ಕೆ ಸೋಮಶೇಖರ್‌ ಅವರು ಹೇಳಿದಂತೆ, ಅವರಿಂದ ನಾನು ಚುನಾವಣೆ ಗೆದ್ದಿಲ್ಲ ಎಂದು ಕಾರ್ಪೋರೇಟರ್ ಲೋಕೇಶ್ ವಿ.ಪಿಯಾ ತಿರುಗೇಟು ನೀಡಿದ್ದಾರೆ.jk

ಕಾಂಗ್ರೆಸ್ ಮಾಜಿ ಶಾಸಕ ಸೋಮಶೇಖರ್ ಹಾಗೂ ಕಾರ್ಪೋರೇಟರ್ ಲೊಕೇಶ್ ವಿ.ಪಿಯಾ ನಡುವಿನ ಶೀತಲ ಸಮರ ಮುಂದುವರೆದಿದ್ದು, ಎಂ.ಕೆ.ಸೋಮಶೇಖರ್, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಲ್ಲೋ ಇದ್ದ ಲೋಕೇಶ್ ಪಿಯಾರನ್ನು ನಾನೇ ಕರೆತಂದು ಟಿಕೆಟ್ ಕೊಟ್ಟು ಕಾರ್ಪೋರೇಟರ್ ಮಾಡಿದ್ದು ಎಂದಿದ್ದರು.
ಮಾಜಿ ಶಾಸಕ ಸೋಮಶೇಖರ್ ಅವರ ಈ ಹೇಳಿಕೆಗೆ ಪತ್ರಿಕಾ ಹೇಳಿಕೆ ಮೂಲಕ ತೀಕ್ಷ್ಣವಾಗಿ ಲೋಕೇಶ್ ಪಿಯಾ ಪ್ರತಿಕ್ರಿಯಿಸಿದ್ದು, ವಿವರ ಹೀಗಿದೆ.
ಸೋಮಶೇಖರ್ ಶಾಸಕರಾಗಿದ್ದಾಗಲೇ ವಾರ್ಡಿನಲ್ಲಿ ಕಾರ್ಪೋರೇಟರ್ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಿರಲಿಲ್ಲ. ಇನ್ನು ಅವರು ಸೋತು ಮಾಜಿಯಾದಾಗ ಹೇಗೆ ತಾನೆ ನನ್ನನ್ನು ಗೆಲ್ಲಿಸಲು ಸಾಧ್ಯ,,? ನೀವು ನಮ್ಮನ್ನ ಬಳಸಿಕೊಂಡ್ರಿ, ನಿಮಗಾಗಿ ನಾವು ಕೆಲಸ ಮಾಡಿದ್ದೀವಿ. ಬಳಿಕ ನೀವು ನನ್ನನ್ನ ಕಡೆಗಣಿಸಿ, ಅನ್ಯಾಯವೆಸಗಿದ್ರಿ.
ನಮ್ಮ ಜನಾಂಗಕ್ಕೆ ನಿಮ್ಮಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮಹಾದೇಶ್ವರ ದೇವಸ್ಥಾನಕ್ಕೆ ಒಂದು ಕೋಟಿ ರೂ. ಅನುದಾನ ಕೊಟ್ಟಿರುವೆ ಎಂದು ಎಂ.ಕೆ.ಸೋಮಶೇಖರ್ ಹೇಳಿದ್ದಾರೆ. ಈ ಅನುದಾನ ಬಂದಿದ್ದು ಸರ್ಕಾರದಿಂದಲೇ ಹೊರತು ನಿಮ್ಮ ಮನೆಯಿಂದ ಕೊಟ್ಟಿದಲ್ಲ. ಈ ಅನುದಾನದಲ್ಲಿ ಎಷ್ಟು ಕಮಿಷನ್ ತಗೋಂಡ್ರಿ ಹೇಳಿ. ನಿಮ್ಮ ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಿ. ನೀವು ಏನೇನ್ ಮಾಡಿದ್ದೀರಾ ಅನ್ನೋದು ನನಗೆ ಪೂರ್ಣ ಗೊತ್ತು.
ಎಲ್ಲೂ ಇದ್ದವರನ್ನ ಕರೆದುಕೊಂಡು ಬಂದು ಪಾಲಿಕೆ ಸದಸ್ಯ ಮಾಡಿದೆ ಎಂದಿದ್ದೀರಾ, ನೀವು ರಾಜಕೀಯಕ್ಕೆ ಬರುವ ಮೊದಲು ಹೇಗಿದ್ರಿ, ಈಗ ಹೇಗಿದ್ದೀರಾ ಅನ್ನೋದು ಗೊತ್ತು. ಎಲ್ಲೆಲ್ಲಿ ಆಸ್ತಿಗಳನ್ನು ಮಾಡಿದ್ದೀರಾ ಅನ್ನೋದು ತಿಳಿದಿದೆ.
ಬೆಂಗಳೂರಿನಲ್ಲಿನಲ್ಲಿ ಅಪಾರ್ಟ್ ಮೆಂಟ್ ನಿಂದ 5 ಲಕ್ಷ ರೂ. ಬಾಡಿಗೆ, ಹೋರ್ಡಿಂಗ್ ಬೋರ್ಡ್ ನಿಂದ 20 ಲಕ್ಷ ರೂ. ನಕಲಿ ಗ್ಯಾಸ್ ಮೂಲಕ ಲಕ್ಷಾಂತರ ರೂ. ಕೌಸ್ತುಭ ಫೈನಾನ್ಸ್ ಮೂಲಕ ನೂರಾರು ಕೋಟಿ ರೂ. ವ್ಯವಹಾರ, ಸಿಎ ನಿವೇಶಗಳು, ಕಲ್ಯಾಣಮಂಟಪಗಳ ಒಡೆತನ ಹೊಂದಿರುವುದು ಈ ಎಲ್ಲಾವು ತಿಳಿದಿದೆ. ಈ ಬಗ್ಗೆ ಸದ್ಯದಲ್ಲೇ ಸಾಕ್ಷಿ ಸಮೇತ ಲೋಕಾಯುಕ್ತರಿಗೆ ದೂರು ನೀಡುವೆ. ಮಾಧ್ಯಮದ ಮುಂದೆಯೂ ಈ ಎಲ್ಲಾ ವಿವರ ಬಹಿರಂಗಪಡಿಸುವೆ. ಇಷ್ಟೆಲ್ಲಾ ಆಸ್ತಿ ಹೊಂದಿರಲು ನೀವೇನು ಟಾಟಾ ಬಿರ್ಲಾ ಸಂಬಂಧಿಕರಲ್ಲ. ಕಾರ್ಯಕರ್ತರ ಶ್ರಮದಿಂದ ಅಧಿಕಾರ ಹೊಂದಿ ಹಣ ಸಂಪಾದನೆ ಮಾಡಿದ್ದೀರಾ. ಮಾತನಾಡುವ ಮೂದಲು ನಾಲಿಗಿ ಬಿಗಿ ಹಿಡಿದು ಮಾತನಾಡಿ. ನಿಮ್ಮ ದಬ್ಬಾಳಿಕೆ, ದೌರ್ಜನ್ಯ ಸಹಿಸಿಕೊಂಡು ಕಾಂಗ್ರೆಸ್ ನ ಅನೇಕ ಕಾರ್ಯಕರ್ತರು ಮೌನವಾಗಿದ್ದಾರೆ. ಅದು ಅವರ ದೌರ್ಬಲ್ಯವಲ್ಲ. ಪಕ್ಷದ ಮೇಲಿನ ಗೌರವದಿಂದ, ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಸುಮ್ಮನಿದ್ದಾರೆ. ಆದರೆ ಇದು ಮಿತಿಮೀರಿದರೆ ಅವರೆಲ್ಲಾ ನಿಮ್ಮ ವಿರುದ್ಧ ಬೀದಿಗಿಳಿಯುತ್ತಾರೆ. ಎಚ್ಚರ.mysore-city-corporation-lokesh-piya-mcc
ನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ, ಮುಡಾ ಮೆಂಬರ್ ಯಾವುದು ಸಿಗದಂತೆ ಮಾಡಿದ್ದು ಮಾಜಿ ಶಾಸಕರಾದ ಸೋಮಶೇಖರ್. ಇಷ್ಟೆಲ್ಲಾ ಅನ್ಯಾಯ ಮಾಡಿದ್ರು, ಬೇಸರವಾದರು ಸಹ ಮಾಜಿ ಸಿಎಂ, ಅಹಿಂದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಮುಖ ನೋಡ್ಕೊಂಡು ನೋವನ್ನು ಸಹಿಸಿಕೊಂಡಿದ್ದೇನೆ ಎಂದಿದ್ದಾರೆ.

key words : mysore-city-corporation-lokesh-piya-mcc