Saturday, August 22, 2026

BDA Apartments

Home Front Page ಸೋಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಬೇಕು- ಆರೋಗ್ಯ ಸಚಿವ ಡಾ.ಕೆ.ಸುಧಾಕರ್..

ಸೋಂಕು ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಮಾಡಬೇಕು- ಆರೋಗ್ಯ ಸಚಿವ ಡಾ.ಕೆ.ಸುಧಾಕರ್..

 

ಬೆಂಗಳೂರು,ಮೇ,7,2021(www.justkannada.in): ರಾಜ್ಯದಲ್ಲಿ ಸೋಂಕಿನ ಕಡಿಮೆಯಾಗಬೇಕಾದ್ರೆ ಲಾಕ್ ಡೌನ್ ಅನಿವಾರ್ಯ. ಲಾಕ್ ಡೌನ್ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಲಾಕ್ ಡೌನ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸೋಂಕು ಪ್ರಮಾಣ, ಸಾವು ನೋವು ಕಡಿಮೆಯಾಗಬೇಕಂದ್ರೆ ಲಾಕ್ ಡೌನ್ ಮಾಡಬೇಕು. ಲಾಕ್ ಡೌನ್ ಮಾಡದಿದ್ದರೇ ಸಾವು ನೋವು ಜಾಸ್ತಿಯಾಗುತ್ತದೆ. ಚೈನ್ ಲಿಂಗ್ ಮುರಿಯಬೇಕು ಅಂದ್ರೆ ಲಾಕ್ ಡೌನ್ ಮಾಡಬೇಕು ಎಂದಿದ್ದಾರೆ.Janatha curfew a failure - Health Minister Dr. K. Sudhakar

ಲಾಕ್ ಡೌನ್ ಮಾಡುವಂತೆ ಸ್ಥಳೀಯವಾಗಿಯೂ ಒತ್ತಡ ಬಂದಿದೆ. ತಜ್ಞರು ಸಹ ಸಲಹೆ ನೀಡಿದ್ದಾರೆ. ಲಾಕ್ ಡೌನ್ ವಿಚಾರವಾಗಿ ಸಿಎಂ ಯಡಿಯೂರಪ್ಪ ಜೊತೆಯಲ್ಲೂ ಮಾತುಕತೆ ನಡೆಸಲಾಗುತ್ತದೆ. ಅಂತಿಮವಾಗಿ ಸಿಎಂ ನಿರ್ಧಾರ ಮಾಡುತ್ತಾರೆ. ಜನರ ಸಾವು ನೋವನ್ನು ತಡೆಗಟ್ಟ ಬೇಕು ಅಂದ್ರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಚಿವ ಸುಧಾಕರ್ ತಿಳಿಸಿದ್ದಾರೆ.

Key words: Lockdown- should be -infection-Minister – Dr. K. Sudhakar.